ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಅಭಿಯಾನವನ್ನೇ ಆರಂಭಿಸಿದೆ. ಈ ಬಗ್ಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾಹಿತಿ ನೀಡಿದ್ದಾರೆ.
ಯೋಜನೆಯಲ್ಲಿ ಇನ್ನಷ್ಟು ಸುಧಾರಣೆ ತರುವುದು ಹಾಗೂ ಯೋಜನೆಯ ಸಮರ್ಪಕ ಜಾರಿ ಕುರಿತಂತೆ ಈಗಾಗ್ಲೇ ಕೃಷಿ ಮತ್ತು ರೈತರ ಕಲ್ಯಾಣಕ್ಕಾಗಿ ನೇಮಕ ಮಾಡಿರುವ ಸಂಸದೀಯ ಸಲಹಾ ಸಮಿತಿ ಚರ್ಚೆ ನಡೆಸಿದೆ.
ಸಮಿತಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಉಳಿದಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗಾಗಿ ಸರ್ಕಾರವು ಕೆಸಿಸಿ ಸ್ಯಾಚುರೇಶನ್ ಅಭಿಯಾನವನ್ನು ನಡೆಸುತ್ತಿದೆ. ಎಲ್ಲಾ ಆಡಳಿತಾತ್ಮಕ ಶುಲ್ಕಗಳು, ಸಂಸ್ಕರಣಾ ಶುಲ್ಕ, ತಪಾಸಣಾ ಶುಲ್ಕ, ಲೆಡ್ಜರ್, ಫೋಲಿಯೊ ಶುಲ್ಕಗಳು ಮುಂತಾದ 3 ಲಕ್ಷ ಅಲ್ಪಾವಧಿಯ ಸಾಲಗಳನ್ನು ತೆಗೆದು ಹಾಕಲಾಗಿದೆ, ಇದರಿಂದಾಗಿ ಹೆಚ್ಚಿನ ರೈತರು ಬಡ್ಡಿ ಸಹಾಯ ಧನ ಯೋಜನೆಯ ಮೂಲಕ ಅಗ್ಗದ ದರದಲ್ಲಿ ಸಾಲವನ್ನು ಪಡೆಯಬಹುದು ಎಂದ್ರು.
ಕೆಸಿಸಿಯನ್ನು ಇನ್ನಷ್ಟು ಸರಳಗೊಳಿಸಿದ್ದು, ರೈತರಿಂದ ಅರ್ಜಿ ಸ್ವೀಕರಿಸಿ 14 ದಿನಗಳೊಳಗೆ ಬ್ಯಾಂಕ್ ಗಳು ಕಿಸಾನ್ ಕ್ರೆಡಿಟ್ ಕಾರ್ಡನ್ನು ವಿತರಿಸಬೇಕೆಂದು ಸಹ ಸೂಚಿಸಲಾಗಿದೆ. ಕೆಸಿಸಿ ಸ್ಕೀಮ್ ನಲ್ಲಿ 2.94 ಕೋಟಿ ರೈತರನ್ನು ಹೊಂದುವ ಮೂಲಕ ಸರ್ಕಾರ ಹೊಸ ಸಾಧನೆ ಮಾಡಿದೆ ಅಂತಾ ಸಚಿವರು ಹೇಳಿಕೊಂಡಿದ್ದಾರೆ. ಈ ರೈತರಿಗೆ 3.22 ಲಕ್ಷ ಕೋಟಿ ಮೊತ್ತದ ಕ್ರೆಡಿಟ್ ಲಿಮಿಟ್ ಅನ್ನು ಕೂಡ ಮಂಜೂರು ಮಾಡಲಾಗಿದೆ.