ಬೆಂಗಳೂರು: ಕಾರ್ಮಿಕ ಇಲಾಖೆಯಲ್ಲಿ ಸುಮಾರು 2.5 ಲಕ್ಷ ಬೋಗಸ್ ಕಾರ್ಡ್ ಗಳು ಇದ್ದು, ಇವುಗಳನ್ನು ಕೂಡಲೇ ರದ್ದುಪಡಿಸುವಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಾರ್ಮಿಕ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ಕಡ್ಡಾಯ ಉಪಧನ ವಿಮಾ ನಿಯಮ 2024 ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿನ ಕಾರ್ಮಿಕರಿಗೆ 46 ಲಕ್ಷ ಕಾರ್ಡ್ ನೀಡಲಾಗಿದ್ದು, ಅವುಗಳಲ್ಲಿ 2.5 ಲಕ್ಷ ಕಾರ್ಡ್ ಬೋಗಸ್ ಎಂದು ತಿಳಿದು ಬಂದಿದೆ. ಅಂತಹ ಬೋಗಸ್ ಕಾರ್ಡ್ ಗಳನ್ನು ರದ್ದು ಮಾಡುವಂತೆ ತಿಳಿಸಿದ್ದಾರೆ. ರಾಜ್ಯದ ಎಲ್ಲಾ ತಾಲೂಕುಗಳಿಂದ ಎರಡರಿಂದ ಮೂರು ಲಕ್ಷ ಸದಸ್ಯರು ನೋಂದಣಿ ಆಗಿದ್ದು, ಅಷ್ಟು ಜನರಲ್ಲಿ ಕೇವಲ 30,000 ಸದಸ್ಯರಿಗೆ ಮಾತ್ರ ಗ್ರಾಚುಟಿ ಬಗ್ಗೆ ತಿಳಿವಳಿಕೆ ಇದೆ. ಉಳಿದವರಿಗೆ ಮಾಹಿತಿ ಇಲ್ಲವೇಕೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.