ಪ್ರತಿ ತಿಂಗಳು ಮೊಬೈಲ್ ಪ್ಲಾನ್, ಇಂಟರ್ನೆಟ್‌ಗೆ ರೀಚಾರ್ಜ್ ಮಾಡುವುದು ತಲೆನೋವಿನ ಕೆಲಸ. ಒಂದು ವೇಳೆ ವ್ಯಾಲಿಡಿಟಿ ಮುಕ್ತಾಯಕ್ಕೂ ಮುನ್ನ ರೀಚಾರ್ಜ್ ಮಾಡಲು ಮರೆತರೆ ಸಮಸ್ಯೆಯಾಗುತ್ತದೆ.
ಹಾಗಾಗಿಯೇ ಇಂತಹ ಸಮಸ್ಯೆ, ಕಿರಿಕಿರಿ ಇಲ್ಲದೇ ಕರೆ ಮತ್ತು ಇಂಟರ್ನೆಟ್ ಸೇವೆಯನ್ನು ಜಿಯೋ 56 ದಿನಗಳವರೆಗೆ ನೀಡ್ತಾ ಇದೆ. 56 ದಿನಗಳ ಪೂರ್ಣ ವ್ಯಾಲಿಡಿಟಿ ಪಡೆಯುವ ಪ್ಲಾನ್ ಒಂದನ್ನು ಜಿಯೋ ಬಿಡುಗಡೆ ಮಾಡಿದೆ. ಇದರರ್ಥ ನೀವು ಎರಡು ತಿಂಗಳವರೆಗೆ ರೀಚಾರ್ಜ್ ಮಾಡುವ ಅಗತ್ಯವಿಲ್ಲ.
ಈ ಜಿಯೋ ಪ್ಲಾನ್ ನ ಬೆಲೆ 533 ರೂಪಾಯಿ. ಈ ಯೋಜನೆಯು 56 ದಿನಗಳ ವ್ಯಾಲಿಡಿಟಿಯೊಂದಿಗೆ ಲಭ್ಯವಿದೆ. ಜಿಯೋದ ಪ್ರಿಪೇಯ್ಡ್ ಪ್ಲಾನ್ ಇದು. ಸಾಕಷ್ಟು ಸೌಲಭ್ಯಗಳು ಇದರಲ್ಲಿವೆ. ಈ ಯೋಜನೆಯಲ್ಲಿ 2 ತಿಂಗಳವರೆಗೆ ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯವಿದೆ. ಪ್ರತಿದಿನ 100 ಎಸ್‌ಎಂಎಸ್ ಸಿಗುತ್ತದೆ. 112 GB ಡೇಟಾವನ್ನು ನೀಡಲಾಗುತ್ತದೆ.
ದಿನಕ್ಕೆ ನೀವು 2GB ಡೇಟಾವನ್ನು ಪಡೆಯಬಹುದು. ಇದರ ಜೊತೆಗೆ ಜಿಯೋ ಟಿವಿ ಅಪ್ಲಿಕೇಶನ್, ಜಿಯೋ ಸಿನಿಮಾ ಜೊತೆಗೆ ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಚಂದಾದಾರಿಕೆ ಸೇರಿದಂತೆ ಅನೇಕ ಇತರ ಪ್ರಯೋಜನಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ.