
ತಮಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮಗೆ ಸೌಮ್ಯ ಲಕ್ಷಣಗಳು ಗೋಚರವಾಗಿದ್ದು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ ಎಂದು ತಿಳಿಸಿದ್ದಾರೆ.
ಎಲ್ಲಾ ಆತ್ಮೀಯರೇ, ಸಾಕಷ್ಟು ಮುಂಜಾಗ್ರತಾ ಕ್ರಮಗಳ ಬಳಿಕವೂ ನಾನು ಸೌಮ್ಯ ಲಕ್ಷಣಗಳೊಂದಿಗೆ ಕೋವಿಡ್ ಪಾಸಿಟಿವ್ ವರದಿಯನ್ನು ಪಡೆದಿದ್ದೇನೆ. ನಾನು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ. ನನ್ನ ಜೊತೆ ಯಾರೆಲ್ಲ ಸಂಪರ್ಕಕ್ಕೆ ಬಂದಿದ್ದಿರೋ ಅವರೆಲ್ಲ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡುತ್ತಿದ್ದೇನೆ. ನಿಮ್ಮನ್ನೆಲ್ಲ ಮತ್ತೊಮ್ಮೆ ನೋಡಲು ಕಾತುರನಾಗಿದ್ದೇನೆ ಎಂದು ಟ್ವಿಟರ್ನಲ್ಲಿ ಚಿರಂಜೀವಿ ಮನವಿ ಮಾಡಿದ್ದಾರೆ.
2020ರ ನವೆಂಬರ್ ತಿಂಗಳಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಇದಾದ ಬಳಿಕ ಇದೀಗ ಮತ್ತೊಮ್ಮೆ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಚಿರಂಜೀವಿ ಅಭಿಮಾನಿಗಳು ನೆಚ್ಚಿನ ನಟನ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತಿದ್ದಾರೆ.
ಇನ್ನು ನಟ ಚಿರಂಜೀವಿ ʼಆಚಾರ್ಯʼ ಸಿನಿಮಾ ಮೂಲಕ ಈ ವರ್ಷ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ನಿರ್ದೇಶಕ ಕೊರಟಲ ಸಿವಾ ಈ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾವು ಏಪ್ರಿಲ್ 1ರಂದು ರಿಲೀಸ್ ಆಗಲಿದೆ.