alex Certify ಹೊಸ ಸಂಸತ್ ಭವನದ ಮೊದಲ ಫೋಟೋ ಹೊರಬಿದ್ದಿದ್ದು ಚುನಾಯಿತ ಸದಸ್ಯರೊಂದಿಗೆ ಅಲ್ಲ, ಬದಲಾಗಿ……….. ; NCP ನಾಯಕ ಶರದ್ ಪವಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಸಂಸತ್ ಭವನದ ಮೊದಲ ಫೋಟೋ ಹೊರಬಿದ್ದಿದ್ದು ಚುನಾಯಿತ ಸದಸ್ಯರೊಂದಿಗೆ ಅಲ್ಲ, ಬದಲಾಗಿ……….. ; NCP ನಾಯಕ ಶರದ್ ಪವಾರ್

ಹೊಸ ಸಂಸತ್ ಭವನದ ಮೊದಲ ಫೋಟೋ ಹೊರಬಿದ್ದಿದ್ದು ಚುನಾಯಿತ ಸದಸ್ಯರೊಂದಿಗೆ ಅಲ್ಲ, ಬದಲಾಗಿ ಕೇಸರಿ ಬಟ್ಟೆ ತೊಟ್ಟಿರುವವರ ಜೊತೆ ಎಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.

ಸಂಸತ್ತಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಸಂವಾದದ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಹೊಸ ಸಂಸತ್ತಿನ ಕಟ್ಟಡದ ಬಗ್ಗೆ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆಯ ಮೂಲಕ ನಿರ್ಧಾರ ತೆಗೆದುಕೊಳ್ಳಬಹುದಿತ್ತು ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಮಹಾತ್ಮಾ ಗಾಂಧಿ ಮಿಷನ್ ವಿಶ್ವವಿದ್ಯಾಲಯದಲ್ಲಿ ನಡೆದ ಸೌಹಾರ್ದ ಬೈಠಕ್ ನಲ್ಲಿ ಅವರು ಮಾತನಾಡಿದರು.

ಸಂಸತ್ತಿನ ಚಟುವಟಿಕೆಗಳಿಗೆ ಸಂವಾದದಲ್ಲಿ ತೊಡಗಿಸಿಕೊಳ್ಳುವಲ್ಲಿ ಸಾಮಾನ್ಯ ಕುಸಿತ ಕಂಡುಬಂದಿದೆ. ಈ ಹಿಂದೆಯೂ ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿತ್ತು. ಆದರೆ ಹೊಸ ಸಂಸತ್ ಭವನದ ಅವಶ್ಯಕತೆ ಏಕೆ ಎಂದು ನನಗೆ ಅರ್ಥವಾಗಲಿಲ್ಲ. ಅದರ ಬಗ್ಗೆ ಮಾತುಕತೆಯ ಮೂಲಕ ರಾಜಕೀಯ ಪಕ್ಷಗಳೊಂದಿಗೆ ನಿರ್ಧಾರ ತೆಗೆದುಕೊಳ್ಳಬಹುದಿತ್ತು. ಆದರೆ ನಾನು ಹೊಸ ಕಟ್ಟಡದ ಬಗ್ಗೆ ಪತ್ರಿಕೆಗಳ ಮೂಲಕ ತಿಳಿದೆ ಎಂದು ಅವರು ಹೇಳಿದರು.

ನಾವು ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ರಾಷ್ಟ್ರಪತಿಗಳನ್ನು ಆಹ್ವಾನಿಸಲು ಒತ್ತಾಯಿಸಿದೆವು. ಅದನ್ನು ಆಡಳಿತ ಪಕ್ಷ ಬಿಜೆಪಿ ವಿರೋಧಿಸುವ ಅಗತ್ಯವಿರಲಿಲ್ಲ . ಸಂಸತ್ತಿನ ಮೊದಲ ಅಧಿವೇಶನದ ನಂತರ ಕ್ಲಿಕ್ ಮಾಡಿದ ಫೋಟೋದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಮತ್ತು ಪಂಡಿತ್ ಜವಾಹರಲಾಲ್ ನೆಹರು ಸೇರಿದಂತೆ ದೇಶದ ಅನೇಕ ನಾಯಕರು ಇದ್ದರು ಎಂದು ಪವಾರ್ ಹೇಳಿದರು.

ಚುನಾಯಿತ ನಾಯಕರಿಗೆ ಮೊದಲು ಹೊಸ ಕಟ್ಟಡಕ್ಕೆ ಪ್ರವೇಶಿಸುವ ಅವಕಾಶ ಸಿಗಲಿಲ್ಲ ಎಂದು ಆರೋಪಿಸಿದ ಶರದ್ ಪವಾರ್ ಹೊಸ ಸಂಸತ್ ಭವನದ ಮೊದಲ ಫೋಟೋ ಹೊರಬಿದ್ದಿದ್ದು ಚುನಾಯಿತ ಸದಸ್ಯರೊಂದಿಗೆ ಅಲ್ಲ, ಕೇಸರಿ ಬಟ್ಟೆ ತೊಟ್ಟಿರುವವರ ಜೊತೆ ಎಂದರು.

ಕೇಂದ್ರ ಸರ್ಕಾರವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬದಿಗಿಟ್ಟು ನೂತನ ಸಂಸತ್ ಭವನವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರೆಂದು ಆರೋಪಿಸಿ ಸುಮಾರು 20 ಪ್ರತಿಪಕ್ಷಗಳು ಉದ್ಘಾಟನಾ ಸಮಾರಂಭದದಿಂದ ದೂರ ಉಳಿದವು. ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಹೊಸ ಸಂಸತ್ ಭವನ ಉದ್ಘಾಟಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...