alex Certify BIG BREAKING: 29 ವರ್ಷಗಳ ನಂತ್ರ ಮುಂಬೈ ಸ್ಪೋಟದ ಆರೋಪಿ, ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಸಹಾಯಕ ಅಬೂಬಕರ್ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: 29 ವರ್ಷಗಳ ನಂತ್ರ ಮುಂಬೈ ಸ್ಪೋಟದ ಆರೋಪಿ, ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಸಹಾಯಕ ಅಬೂಬಕರ್ ಅರೆಸ್ಟ್

ನವದೆಹಲಿ: 1993 ರ ಮುಂಬೈ ಸ್ಫೋಟದ ಆರೋಪಿ ಮತ್ತು ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ ಅಬೂಬಕರ್ ನನ್ನು ಯುಎಇಯಲ್ಲಿ ಬಂಧಿಸಲಾಗಿದೆ.

29 ವರ್ಷಗಳ ಬೇಟೆಯ ನಂತರ, ಭಾರತೀಯ ಭದ್ರತಾ ಏಜೆನ್ಸಿಗಳು 1993 ರ ಮುಂಬೈ ಸರಣಿ ಸ್ಫೋಟದ ಆರೋಪಿ ಮತ್ತು ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ ಅಬೂಬಕರ್ ನನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಯಶಸ್ವಿಯಾಗಿ ಬಂಧಿಸಿದ್ದು, ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾದ ಅಬೂಬಕರ್‌ ನ ಹಸ್ತಾಂತರ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.

1993 ರ ಸ್ಫೋಟದ ಪ್ರಮುಖ ಸಂಚುಕೋರರಲ್ಲಿ ಒಬ್ಬರಾದ ಅಬೂಬಕರ್ ಯುಎಇ ಮತ್ತು ಪಾಕಿಸ್ತಾನದಲ್ಲಿ ನೆಲೆಸಿದ್ದ. 1997 ರಲ್ಲಿ ಆತನ ವಿರುದ್ಧ ‘ರೆಡ್ ಕಾರ್ನರ್ ನೋಟಿಸ್’ ಹೊರಡಿಸಲಾಗಿತ್ತು. ದಾವೂದ್ ಇಬ್ರಾಹಿಂನ ಪ್ರಮುಖ ಸಹಚರರಾದ ಮೊಹಮ್ಮದ್ ಮತ್ತು ಮುಸ್ತಫಾ ದೊಸ್ಸಾ ಅವರೊಂದಿಗೆ ಗಲ್ಫ್ ದೇಶಗಳಿಂದ ಮುಂಬೈಗೆ ಚಿನ್ನ, ಬಟ್ಟೆ ಮತ್ತು ಎಲೆಕ್ಟ್ರಾನಿಕ್ಸ್ ಕಳ್ಳಸಾಗಣೆಯಲ್ಲಿ ಅಬೂಬಕರ್ ತೊಡಗಿದ್ದ. ಆತನ ಪೂರ್ಣ ಹೆಸರು ಅಬೂಬಕರ್ ಅಬ್ದುಲ್ ಗಫೂರ್ ಶೇಖ್.

ಅಬೂಬಕರ್ 2019 ರಲ್ಲಿ ಬಂಧಿಸಲ್ಪಟ್ಟರೂ, ಕೆಲವು ದಾಖಲಾತಿ ಸಮಸ್ಯೆಗಳಿಂದ ಬಂಧನದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.

1993 ರ ಮಾರ್ಚ್ 12 ರಂದು ಮುಂಬೈ ಸರಣಿ ಸ್ಪೋಟ ನಡೆದಿದ್ದು, 12 ಭಯೋತ್ಪಾದಕ ಬಾಂಬ್ ದಾಳಿಗಳ ಸರಣಿಯಯಲ್ಲಿ 257 ಮಂದಿ ಸಾವು ಕಂಡಿದ್ದರು. 1,400 ಮಂದಿ ಗಾಯಗೊಂಡಿದ್ದರು. ಈ ದಾಳಿಗಳನ್ನು ದಾವೂದ್ ಇಬ್ರಾಹಿಂ ತನ್ನ ಅಧೀನದಲ್ಲಿದ್ದ ಟೈಗರ್ ಮೆಮನ್ ಮತ್ತು ಯಾಕೂಬ್ ಮೆಮನ್ ಸಹಾಯದಿಂದ ಯೋಜಿಸಿ ಸಂಘಟಿಸಿದ್ದ.

21 ಮಾರ್ಚ್ 2013 ರಂದು, ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಯಾಕೂಬ್ ಮೆಮನ್ ವಿರುದ್ಧದ ಮರಣದಂಡನೆಯನ್ನು ಎತ್ತಿಹಿಡಿಯಿತು, 10 ಮಂದಿ ವಿರುದ್ಧದ ಮರಣದಂಡನೆಯನ್ನು ಜೀವಾವಧಿಗೆ ಬದಲಾಯಿಸಿತು.

30 ಜುಲೈ 2015 ರಂದು, ಮಹಾರಾಷ್ಟ್ರ ಸರ್ಕಾರ ಯಾಕೂಬ್ ಅನ್ನು ನಾಗ್ಪುರ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಿತು. ಆದರೆ, ಇಬ್ಬರು ಪ್ರಮುಖ ಆರೋಪಿಗಳಾದ ದಾವೂದ್ ಇಬ್ರಾಹಿಂ ಮತ್ತು ಟೈಗರ್ ಮೆಮನ್ ಅವರನ್ನು ಇನ್ನೂ ಬಂಧಿಸಿಲ್ಲ.

ದಾವೂದ್ ಪಾಕಿಸ್ತಾನದಲ್ಲಿ ಇಲ್ಲ ಎಂದು ಪಾಕ್ ಸಮರ್ಥಿಸಿಕೊಂಡಿದ್ದರೆ, ಭಾರತ ಅಲ್ಲೇ ಇದ್ದಾನೆ ಎಂದು ಸತತವಾಗಿ ಹೇಳುತ್ತಲೇ ಬಂದಿದೆ. ಟೈಗರ್ ಮೆಮನ್ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದಾನೆ. ಕರಾಚಿಯಲ್ಲಿ ದಾವೂದ್ ಇಬ್ರಾಹಿಂನ ನಿರ್ದಿಷ್ಟ ವಿಳಾಸಗಳನ್ನು ಪತ್ತೆಹಚ್ಚಲಾಗಿದ್ದರೂ, ಟೈಗರ್ ಮೆಮನ್ ಬಹುತೇಕ ಭೂಗತವಾಗಿಯೇ ಇದ್ದಾನೆ. ಆತನ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...