ಎಲ್ಲೆಲ್ಲೂ ಸೈಬರ್ ಭದ್ರತೆಯ ಮಾತುಗಳೇ ಕೇಳಿಬರುತ್ತಿರುವ ನಡುವೆಯೇ, ಗೂಗಲ್ ಪ್ಲೇ ಸ್ಟೋರ್ ಮೂಲಕ ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಲೀಕ್ ಮಾಡಬಲ್ಲ 19,000ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳ ಬಗ್ಗೆ ಡಿಜಿಟಲ್ ಭದ್ರತಾ ದಿಗ್ಗಜ ಅವಾಸ್ತ್ ಎಚ್ಚರಿಸಿದೆ.
ಈ ಅಪ್ಲಿಕೇಶನ್‌ಗಳು ನಿಮ್ಮ ವೈಯಕ್ತಿಕ ಮಾಹಿತಿ ಸೋರಿಕೆಯಾಗುವುದಲ್ಲದೇ ನಿಮ್ಮ ಸ್ಮಾರ್ಟ್‌ಫೋನ್‌ನ ಭದ್ರತೆಯನ್ನೇ ರಿಸ್ಕ್‌ನಲ್ಲಿಡುತ್ತದೆ ಎಂದು ಅವಾಸ್ತ್ ತಿಳಿಸಿದೆ.
ಆಂಡ್ರಾಯ್ಡ್‌ನಲ್ಲಿ ಬಳಸುವ 19,300ಕ್ಕೂ ಹೆಚ್ಚಿನ ಅಪ್ಲಿಕೇಶನ್‌ಗಳು ಫೈರ್‌ಬೇಸ್‌ನಲ್ಲಿ ಮಿಸ್ ಕಾನ್ಫಿಗರೇಷನ್ ಮೂಲಕ ನಿಮ್ಮ ಮಾಹಿತಿಯನ್ನು ಸಾರ್ವಜನಿಕಗೊಳಿಸುವ ಸಾಧ್ಯತೆ ಇದೆ ಎಂದು ಅವಾಸ್ತ್ ತಿಳಿಸಿದೆ.
ನಾಳೆ ನೀಟ್ ಪರೀಕ್ಷೆ; 16 ಲಕ್ಷ ವಿದ್ಯಾರ್ಥಿಗಳಿಂದ ನೋಂದಣಿ
ಬಳಕೆದಾರರ ಮಾಹಿತಿಯನ್ನು ಸ್ಟೋರ್ ಮಾಡಲು ಫೈರ್‌ಬೇಸ್ ಅನ್ನು ಆಂಡ್ರಾಯ್ಡ್ ಬಳಸುತ್ತದೆ. ವೈಯಕ್ತಿಕವಾಗಿ ಗುರುತು ಹಿಡಿಯಬಲ್ಲ ಮಾಹಿತಿಗಳಾದ ಹೆಸರು, ವಿಳಾಸ, ಸ್ಥಳ ಮಾಹಿತಿ, ಪಾಸ್‌ವರ್ಡ್‌ಗಳು ಸೇರಿದಂತೆ ಅನೇಕ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆ ಇದೆ.
ಲೈಫ್‌ಸ್ಟೈಲ್, ಗೇಮಿಂಗ್, ಫುಡ್ ಡೆಲಿವರಿ, ಇಮೇಲ್ ಹಾಗೂ ಇನ್ನಿತರೆ ರೀತಿಯ ಅಪ್ಲಿಕೇಶನ್‌ಗಳ ಮೂಲಕ ಫೈರ್‌ಬೇಸ್‌ನಲ್ಲಿ ಸೋರಿಕೆಯಾಗುವ ಸಾಧ್ಯತೆ ಇದೆ.
ತನ್ನ ಬಳಕೆದಾರರಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಲು ಗೂಗಲ್‌ಗೆ ಅವಾಸ್ತ್ ಸಲಹೆ ನೀಡಿದೆ.