ನವದೆಹಲಿ: 75ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೆಹಲಿಯ ಕರ್ತವ್ಯಪಥದಲ್ಲಿ ಪಥ ಸಂಚಲನ, ಸ್ತಬ್ಧಚಿತ್ರ ಪ್ರದರ್ಶನ ಕಳೆಕಟ್ಟಿದೆ. ಈ ನಡುವೆ ಈ ಬಾರಿ ಗಣರಾಜ್ಯೋಸವ ಸಂಭ್ರಮದಲ್ಲಿ ಕೇಂದ್ರ ಸಂಸ್ಕೃತಿ ಇಲಾಖೆಯಿಂದ 1900 ಸೀರೆಗಳ ಪ್ರದರ್ಶನ ಮಾಡಲಾಯಿತು.
ಸಂಸ್ಕೃತಿ ಸಚಿವಾಲಯದ ಪ್ರಾಯೋಜಕತ್ವದಲ್ಲಿ ದೇಶದ ವಿವಿಧ ರಾಜ್ಯಗಳ 1900 ಬಗೆಯ ಸೀರೆ ಪ್ರದರ್ಶನ ಮಡಿದ್ದು ವಿಶೇಷ. ಸೀರೆ ಪ್ರದ್ರಶನಕ್ಕೆ ಅನಂತ ಸೂತ್ರ ಎಂದು ಹೆಸರಿಡಲಾಗಿದೆ.
ಕಸೂತಿ ಕಲೆಗೆ ಉತ್ತೇಜನ ನೀಡುವ ಸಲುವಾಗಿ ಸೀರೆ ಪ್ರದರ್ಶನ ಮಾಡಲಾಯಿತು. ಸೀರೆ ಪ್ರದರ್ಶನದಲ್ಲಿ ಮೈಸೂರು ಸಿಲ್ಕ್. ಕಾಂಚಿವರಂ, ಕಾಶ್ಮೀರದ ಕಾಶಿದಾ ಸೀರೆ ಮೊದಲಾದವುಗಳು ಪ್ರದರ್ಶನಗೊಂಡವು.