ದೇಶದಲ್ಲಿ ಹದಿಹರೆಯದವರು ಹೃದಯಾಘಾತಕ್ಕೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ನವಿ ಮುಂಬೈನ ಐರೋಲಿಯಿಂದ ಸ್ಥಳೀಯ ರೈಲು ಹತ್ತಿದ ನಂತರ 19 ವರ್ಷದ ಯುವತಿಯೊಬ್ಬಳು ಸೌಮ್ಯ ಹೃದಯಾಘಾತಕ್ಕೆ ಒಳಗಾದ ಘಟನೆ ನಡೆದಿದೆ.
ಘನ್ಸೋಲಿ ಮೂಲದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಆಕೆ ಮನೆಗೆ ತೆರಳುತ್ತಿದ್ದಾಗ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಅವಳು ನೋವಿನಿಂದ ನರಳುತ್ತಿರುವುದನ್ನು ಕೇಂದ್ರ ರೈಲ್ವೇಯ ಇಬ್ಬರು ಟಿಕೆಟ್ ಚೆಕ್ಕರ್ಗಳು (ಟಿಸಿಗಳು) ಗುರುತಿಸಿದರು. ನಂತರ ರೈಲು ಥಾಣೆ ತಲುಪಿದ ತಕ್ಷಣ ತುರ್ತು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಯಿತು
ಆಕೆಯನ್ನ ಹೆಚ್ಚಿನ ಚಿಕಿತ್ಸೆಗೆ ಐಸಿಯುಗೆ ದಾಖಲಿಸಿದ ವೇಳೆ ಅವರು ಲಘು ಹೃದಯಾಘಾತದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.