ಮಂಗಳೂರು: 19 ವರ್ಷದ ಯುವಕನೊಬ್ಬನಿಗೆ ಎರಡು ನಿಮಿಷಗಳ ಅಂತರದಲ್ಲಿ ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ನೀಡಿರುವ ಆಘಾತಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಸುಳ್ಯ ತಾಲೂಕಿನ ಕೂಟೇಲು ಮೂಲದ ಕೆ.ಬಿ.ಅರುಣ್ ಎಂಬಾತ ಎರಡು ಡೋಸ್ ಲಸಿಕೆ ಪಡೆದಿರುವ ಯುವಕ. ಕೂಡಲೇ ಅಧಿಕಾರಿಗಳು ಆತನನ್ನು 4 ಗಂಟೆಗಳ ಕಾಲ ತೀವ್ರ ನಿಗಾಗೆ ಒಳಪಡಿಸಿ, ನಂತರ ಮನೆಗೆ ಕಳುಹಿಸಿದರು. ಬುಧವಾರದಿಂದಲೂ ಆತನ ಮೇಲೆ ಆರೋಗ್ಯಾಧಿಕಾರಿಗಳು ನಿಗಾ ವಹಿಸಿದ್ದು, ಯುವಕನಿಗೆ ಯಾವುದೇ ರೀತಿಯ ಪ್ರತಿಕೂಲ ಪರಿಣಾಮ ಬೀರಿಲ್ಲ ಅನ್ನೋದು ತಿಳಿದು ಬಂದಿದೆ.
BREAKING NEWS: ಮೈಸೂರಲ್ಲಿ ಮತ್ತೆ ಕಾಮುಕರ ಅಟ್ಟಹಾಸ, ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ…?
ದಿನಗೂಲಿ ಕಾರ್ಮಿಕನಾಗಿ ದುಡಿಯುತ್ತಿರುವ ಅರುಣ್, ಸುಳ್ಯ ತಾಲೂಕಿನ ದುಗ್ಗಲಕಡಾ ಪ್ರೌಢಶಾಲೆಗೆ ಲಸಿಕೆ ಪಡೆಯಲು ತೆರಳಿದ್ದರು. ಈ ವೇಳೆ ಮೊದಲ ಡೋಸ್ ಲಸಿಕೆ ಪಡೆದ ಅರುಣ್, ಅಲ್ಲೇ ಕೊಠಡಿಯಲ್ಲಿ ಸ್ವಲ್ಪ ಸಮಯ ಕಾಯುತ್ತಿದ್ದರು. ಅದೇ ಸಿಬ್ಬಂದಿ ಅವರಿಗೆ 2ನೇ ಡೋಸ್ ಲಸಿಕೆ ನೀಡಿದಾಗ ಆತ ಈಗಾಗಲೇ ಲಸಿಕೆ ಪಡೆದಿದ್ದ ಅನ್ನೋದು ಸಿಬ್ಬಂದಿಗೆ ತಿಳಿದಿರಲಿಲ್ಲ.
ಲಸಿಕೆ ಹಾಕಿಸಿಕೊಂಡ ನಂತರ ಯುವಕ ಕೊಠಡಿಯಿಂದ ಹೊರಹೋಗದ ಕಾರಣ ಈ ಗೊಂದಲ ಉಂಟಾಗಿದೆ ಎಂದು ಸುಳ್ಯ ತಾಲೂಕು ಆರೋಗ್ಯ ಅಧಿಕಾರಿ ಡಾ.ಬಿ.ನಂದಕುಮಾರ್ ತಿಳಿಸಿದ್ದಾರೆ. ಎರಡು ಡೋಸ್ ಗಳ ಲಸಿಕೆ ಅಗತ್ಯವಿದೆ ಎಂದು ತಿಳಿದು ಯುವಕ ಕೊಠಡಿಯಲ್ಲೇ ಕುಳಿತಿದ್ದರು ಎನ್ನಲಾಗಿದೆ. ಆತನನ್ನು ಗುರುತಿಸುವಲ್ಲಿ ಸಿಬ್ಬಂದಿ ಕೂಡ ವಿಫಲರಾಗಿದ್ದಾರೆ.