ಅಪರಿಚಿತರ ವಾರ್ಡ್ರೋಬ್‌ಗಳನ್ನು ಅಚ್ಚುಕಟ್ಟಾಗಿ ಇಡಲು ನೆರವಾಗುವ ಮೂಲಕ ಪ್ರತಿ ತಿಂಗಳು 500 ಪೌಂಡ್ (50,000 ರೂ.ಗಳು) ದುಡಿಯುತ್ತಿದ್ದಾಳೆ 19-ವರ್ಷದ ವಿದ್ಯಾರ್ಥಿನಿ ಎಲ್ಲಾ ಮ್ಯಾಕ್‌ಮಹೋನ್.
ಬ್ರಿಟನ್‌ನ ಲೀಸೆಸ್ಟರ್‌ನ ಎಲ್ಲಾ, ವಾರ್ಡ್ರೋಬ್‌ಗಳನ್ನು ಚೊಕ್ಕವಾಗಿಡಲು 3-9 ಗಂಟೆಗಳನ್ನು ವಿನಿಯೋಗಿಸುತ್ತಿದ್ದಾರೆ.
“ನನಗೆ ಅಚ್ಚುಕಟ್ಟಾಗಿ ವಸ್ತುಗಳನ್ನು ಜೋಡಿಸುವುದು ಎಂದರೆ ಬಹಳ ಇಷ್ಟ. ಇದನ್ನು ನಾನು ದಿನವಿಡೀ ಮಾಡಬಲ್ಲೆ. ವಸ್ತುಗಳು ಪರಿಪೂರ್ಣವಾಗಿ ಕಾಣುವಂತೆ ಮಾಡುವುದು ನನಗೆ ಇಷ್ಟ,” ಎಂದು ಫ್ಯಾಶನ್ ಮತ್ತು ವಿನ್ಯಾಸದ ವಿದ್ಯಾರ್ಥಿನಿ ಡೇಲಿ ಮೇಲ್‌ಗೆ ತಿಳಿಸಿದ್ದಾರೆ.
ಪ್ರತಿಯೊಬ್ಬ ಗ್ರಾಹಕರಿಗೂ 15-20 ಪೌಂಡ್ ಚಾರ್ಜ್ ಮಾಡುವ ಎಲ್ಲಾಗೆ 20ರಷ್ಟು ಸಕ್ರಿಯ ಕ್ಲೈಂಟ್‌ಗಳಿದ್ದಾರೆ. ಪ್ರತಿ ಎರಡು ವಾರಗಳಿಗೊಮ್ಮೆ ಇವರ ಮನೆಗಳಿಗೆ ಭೇಟಿ ಕೊಡುತ್ತಾರೆ ಎಲ್ಲಾ.
“ನನಗೆ ಫ್ಯಾಶನ್ ಇಷ್ಟವಾಗುತ್ತದೆ ಮತ್ತು ಬಟ್ಟೆಗಳನ್ನು ನೋಡುವುದು ನನಗೆ ಭಾರೀ ಖುಷಿ ವಿಚಾರ. ಹೊಸ ಕ್ಲೈಂಟ್ ಸಿಕ್ಕಾಗ ಅವರ ಬಟ್ಟೆಗಳನ್ನು ನೋಡುವುದನ್ನು ಇಷ್ಟ ಪಡುತ್ತೇನೆ, ಇದರಿಂದ ಎಷ್ಟು ಕೆಲಸ ಮಾಡಿದೆ ಎನ್ನುವುದು ಗೊತ್ತಾಗುವುದಿಲ್ಲ. ಇದಾದ ಮೇಲೆ 4-6 ಬ್ಯಾಗ್‌ಗಳಷ್ಟು ಅನಗತ್ಯವಾದ ಬಟ್ಟೆಗಳು ಸಿಕ್ಕಾಗ ಅವುಗಳನ್ನು ದಾನ ಮಾಡುವ ಅಂಗಡಿಯೊಂದಕ್ಕೆ ಕೊಡುತ್ತೇವೆ,” ಎನ್ನುತ್ತಾರೆ ಎಲ್ಲಾ.
ವಾರ್ಡ್ರೋಬ್‌ಗಳನ್ನು ತಾವು ಅಚ್ಚುಕಟ್ಟಾಗಿ ಇಡುವ ಮುನ್ನ ಹಾಗೂ ನಂತರದ ಚಿತ್ರಗಳನ್ನು ಶೇರ್ ಮಾಡುವ ಎಲ್ಲಾ ತಾವು ವಿವಿಯಲ್ಲಿ ಅಧ್ಯಯನ ಮಾಡುವ ವೇಳೆಯೇ ಮನೆಯೊಂದನ್ನು ಖರೀದಿ ಮಾಡಲು ಬಯಸಿದ್ದಾರೆ.