ಫ್ಯಾಮಿಲಿ ದೊಡ್ಡದಾಗಿದ್ದರೆ ಒಟ್ಟಿಗೆ ಪ್ರವಾಸ ಮಾಡೋದು, ಊರಿಗೆ ಹೋಗೋದು, ಪಿಕ್ನಿಕ್ ಇವುಗಳಲ್ಲಿರೋ ಮಜಾನೇ ಬೇರೆ. ಇದಕ್ಕಾಗಿ ನಮ್ಮ ವಾಹನ ಕೂಡ ದೊಡ್ಡದಿರಬೇಕು. ಕಡಿಮೆ ಬೆಲೆಯಲ್ಲಿ ದೊಡ್ಡ ಕಾರು ಖರೀದಿ ಮಾಡುವ ಆಸೆ ನಿಮಗಿದ್ದರೆ ಭಾರತದಲ್ಲಿ ಅಂತಹ ಸಾಕಷ್ಟು ವಾಹನಗಳು ಲಭ್ಯವಿವೆ.
Datsun GO+, Renault Triber ಮತ್ತು Maruti Suzuki Ertiga ಸೇರಿದಂತೆ ಕೈಗೆಟುಕುವ ದರದಲ್ಲಿ ಅನೇಕ 7 ಸೀಟರ್ ಕಾರುಗಳಿವೆ. ಇವುಗಳ ಪೈಕಿ ರೆನಾಲ್ಟ್ ಟ್ರೈಬರ್ ಕಾರಿಗೆ 60,000 ರೂಪಾಯಿವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಈ ಕಾರಿನ ಸ್ಪೆಷಾಲಿಟಿ ಏನು ? ಬೆಲೆ ಎಷ್ಟಾಗುತ್ತೆ ? ಎಲ್ಲವನ್ನೂ ನೋಡೋಣ.
ರೆನಾಲ್ಟ್ ಟ್ರೈಬರ್ 1.0 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು ಎಂಜಿನ್ 72PS ಪವರ್ ಮತ್ತು 96NM ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಮತ್ತು AMT ಆಯ್ಕೆ ಇದರಲ್ಲಿದೆ. 19 ಕಿಮೀವರೆಗೆ ಮೈಲೇಜ್ ನೀಡಬಲ್ಲದು. ಎಎಂಟಿಯಲ್ಲಿ ಮೈಲೇಜ್ ಸ್ವಲ್ಪ ಕಡಿಮೆ. MPV ಒಟ್ಟು 10 ರೂಪಾಂತರಗಳಲ್ಲಿ ಲಭ್ಯವಿದೆ. ರೆನಾಲ್ಟ್ ಟ್ರೈಬರ್ ಬೆಲೆ ರೂ 5,91,800ರಿಂದ ಪ್ರಾರಂಭವಾಗಿ 8,50,800 ರೂಪಾಯಿವರೆಗೆ ಇದೆ.
ಇದರ RXE ಮಾಡೆಲ್ನ ಬೆಲೆ 5,91,800 ಆಗಿದೆ. ಗ್ಲೋಬಲ್ ಎನ್ಸಿಎಪಿ, ಕ್ರ್ಯಾಶ್ ಪರೀಕ್ಷೆಗಳಲ್ಲಿ ವಯಸ್ಕರಿಗೆ 4 ಸ್ಟಾರ್ ಮತ್ತು ಮಗುವಿಗೆ 3 ಸ್ಟಾರ್ ಎಂದು ಇದಕ್ಕೆ ರೇಟಿಂಗ್ಸ್ ಕೊಟ್ಟಿದೆ. ರೆನಾಲ್ಟ್ ಟ್ರೈಬರ್ ಕಾರಿಗೆ 14-ಇಂಚಿನ ಫ್ಲೆಕ್ಸ್ ವೀಲ್ಗಳನ್ನು ಅಳವಡಿಸಲಾಗಿದೆ. ಪಿಯಾನೋ ಬ್ಲ್ಯಾಕ್ ಫಿನಿಶ್ನೊಂದಿಗೆ ಡ್ಯುಯಲ್-ಟೋನ್ ಡ್ಯಾಶ್ಬೋರ್ಡ್ ಇದರಲ್ಲಿದೆ.
ಸಂಪೂರ್ಣ ಡಿಜಿಟಲ್ ಎಲ್ಇಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕ್ರೋಮ್ ರಿಂಗ್ಗಳೊಂದಿಗೆ ಎಚ್ವಿಎಸಿ ನಾಬ್ಗಳು, ಒಳಗಿನ ಬಾಗಿಲಿಗೆ ಕಪ್ಪನೆಯ ಹ್ಯಾಂಡಲ್, ಆಪಲ್ ಕಾರ್ಪ್ಲೇ ಮತ್ತು ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂನೊಂದಿಗೆ ಆಂಡ್ರಾಯ್ಡ್ ಆಟೋ ಈ ಕಾರಿನಲ್ಲಿ ಲಭ್ಯವಿದೆ. ಮಹಾರಾಷ್ಟ್ರ, ಗೋವಾ, ಕೇರಳ ಮತ್ತು ಗುಜರಾತ್ನಲ್ಲಿ ರೆನಾಲ್ಟ್ ಟ್ರೈಬರ್ನ ನಿರ್ದಿಷ್ಟ ಕಾರಿನ ಬೆಲೆಯಲ್ಲಿ 60,000 ರೂಪಾಯಿ ಡಿಸ್ಕೌಂಟ್ ನೀಡಲಾಗುತ್ತಿದೆ. ಇತರ ರಾಜ್ಯಗಳಲ್ಲಿ ಕಂಪನಿ 55,000 ರೂಪಾಯಿವರೆಗೆ ಗ್ರಾಹಕರಿಗೆ ಬೇರೆ ಬೇರೆ ಪ್ರಯೋಜನಗಳನ್ನು ನೀಡುತ್ತಿದೆ.