ಮಣಿಪುರದ 18 ವರ್ಷದ ನಿಕೋಲಸ್ ಕಿಪ್‌ಜೆನ್ ಕಳೆದ ವಾರ ಗುವಾಹಟಿಯ ಶಾಪಿಂಗ್ ಮಾಲ್‌ಗೆ ಭೇಟಿ ನೀಡಿದ್ದು, ಈ ವೇಳೆಗೆ ಅನಿರೀಕ್ಷಿತವಾಗಿ ಎದುರಾದ ಊಟದ ಸ್ಪರ್ಧೆಯಲ್ಲು ಪಾಲ್ಗೊಂಡು ವಿಜಯದ ನಗೆ ಬೀರಿದ್ದಾನೆ.
ತಾನು ಮಾಲ್‌ಗೆ ಭೇಟಿ ಕೊಡುವ ಮುನ್ನ ಅಲ್ಲಿ ಈ ರೀತಿ ಸ್ಒರ್ಧೆಯ ಕಲ್ಪನೆಯೇ ಆತನಿಗಿರಲಿಲ್ಲ.
‘ಮಹಾರಾಜ ಥಾಲಿ’ ಎಂದು ಕರೆಯಲ್ಪಡುವ ಇದರಲ್ಲಿ ನಾನ್‌ನ ಎರಡು ಪೀಸ್, ಒಂದು ಪ್ಲೇಟ್ ಮಸಾಲೆ ತಂದೂರಿ, ಒಂದು ಬೌಲ್ ಆಫ್ಘಾನಿ ಚಿಕನ್, ಒಂದು ಪ್ಲೇಟ್ ಚಿಕನ್ 65, ಒಂದು ಲೋಟ ಸ್ವೀಟ್ ಲಸ್ಸಿ, ಮೊಜಿತೋ, ನಾಲ್ಕು ಬೌಲ್ ರೈತಾ ಸೇರಿ ಹಲವು ರೀತಿಯ ಸಿಹಿತಿಂಡಿ. ಇದೆಲ್ಲವನ್ನೂ ಮುಗಿಸಲು ಕೇವಲ 45 ನಿಮಿಷಗಳ ಸಮಯವಿತ್ತು. ಈ ಸಮಯದೊಳಗೆ ಊಟ ಮುಗಿಸಿದರೆ ವಿಜೇತರು 10,000 ರೂ. ಗೆಲ್ಲಬಹುದೆಂದು ಘೋಷಿಸಲಾಗಿತ್ತು.
ಸವಾಲನ್ನು ತೆಗೆದುಕೊಳ್ಳಲು ನಿಕೋಲಸ್ ಅನ್ನು ಪ್ರಚೋದಿಸಿದ್ದು ನಿಜವಾಗಿಯೂ ಹಸಿವು ಅಲ್ಲ. ಅನೇಕರು ತಿನ್ನುವ ಸವಾಲಿನಲ್ಲಿ ಪ್ರಯತ್ನಿಸಿದರು ವಿಫಲರಾದರು. ನಿಕೋಲಸ್ ಮಹಾರಾಜ ಥಾಲಿಯ ಸಂಪೂರ್ಣ ಕೋರ್ಸ್ ಅನ್ನು 28 ನಿಮಿಷ ಮತ್ತು 30 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ.
ನಿಕೋಲಸ್ ಸಾಧನೆಗೆ ಮಳಿಗೆಯ ಮಾಲೀಕ ಆಕಾಶ್ ಹಜಾರಿಕಾ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಚಿಕ್ಕ ಹುಡುಗನು ಸವಾಲನ್ನು ಪೂರ್ಣಗೊಳಿಸುತ್ತಾನೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಅವರ ಸಾಧನೆಗೆ ಕಿರೀಟ ತೊಡಿಸಿದೆವು. ಥಾಲಿಯಲ್ಲಿ ತಿಂಡಿ ಮುಗಿಸಿ ಐಸ್ ಕ್ರೀಂ ಕೇಳಿದರು ಎಂದ ಅವರು ಮುಂದೆ ಬುಲೆಟ್ ಚಾಲೆಂಜ್ ಆರಂಭಿಸುತ್ತಿದ್ದೇವೆ ಎಂದರು.