alex Certify ಊಟ, ನಡಿಗೆ, ಮಾತು ಎಲ್ಲವೂ ಅಸಾಧ್ಯ: ಹದಿಹರೆಯದ ಯುವತಿಯನ್ನು ಕಾಡುತ್ತಿದೆ ಅಪರೂಪದ ವಿಚಿತ್ರ ಕಾಯಿಲೆ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಊಟ, ನಡಿಗೆ, ಮಾತು ಎಲ್ಲವೂ ಅಸಾಧ್ಯ: ಹದಿಹರೆಯದ ಯುವತಿಯನ್ನು ಕಾಡುತ್ತಿದೆ ಅಪರೂಪದ ವಿಚಿತ್ರ ಕಾಯಿಲೆ!

Teen in constant pain is unable to walk, talk or eat and doctors don't know  why - Daily Star

ಊಟ, ಆಟ, ಪಾಠ ಇದರ ಜೊತೆಗೆ ಮಾತನಾಡುವುದು, ನಡಿಗೆ ಇವೆಲ್ಲವೂ ಪ್ರತಿಯೊಬ್ಬ ಮನುಷ್ಯ ಇನ್ನೊಬ್ಬರ ಸಹಾಯವಿಲ್ಲದೆ ಮಾಡುವ ಕೆಲವು ಚಟುವಟಿಕೆಗಳು. ಈ ಮೂಲಭೂತ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗದಿದ್ದರೆ ಇತರರ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಇಂಗ್ಲೆಂಡ್‌ನಲ್ಲಿ ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ.  ಹದಿಹರೆಯದ ಯುವತಿಯೊಬ್ಬಳು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಇದರಿಂದ ಆಕೆಗೆ ನಡೆಯಲು, ಮಾತನಾಡಲು ಅಥವಾ ಊಟ ಮಾಡಲು ಸಾಧ್ಯವಾಗುತ್ತಿಲ್ಲ.

18 ವರ್ಷದ ಮಿಲ್ಲಿ ಮ್ಯಾಕ್‌ಐನ್ಶ್ ಎಂಬ ಯುವತಿಗೆ ಮೈಯಾಲ್ಜಿಕ್ ಎನ್ಸೆಫಲೋಮೈಲಿಟಿಸ್ ಎಂಬ ಅಪರೂಪದ ಕಾಯಿಲೆಯಿದೆ. ಇದನ್ನು ಸಾಮಾನ್ಯವಾಗಿ ME ಎಂದು ಕರೆಯಲಾಗುತ್ತದೆ. ಈ ರೋಗವನ್ನು ದೀರ್ಘಕಾಲದ ಆಯಾಸ ಸಿಂಡ್ರೋಮ್ ಎಂದೂ ಕರೆಯುತ್ತಾರೆ. ಇದು ಬಹು-ವ್ಯವಸ್ಥೆಯ ಕಾಯಿಲೆಯಾಗಿದ್ದು, ವ್ಯಕ್ತಿಯ ದೈಹಿಕ ಸಾಮರ್ಥ್ಯ ಮತ್ತು ಜೀವನದ ಗುಣಮಟ್ಟವನ್ನು ಹದಗೆಡಿಸುತ್ತದೆ. ಆದರೆ ಇದನ್ನು ಪತ್ತೆಹಚ್ಚಲು ಯಾವುದೇ ನಿರ್ದಿಷ್ಟ ಪರೀಕ್ಷೆಗಳಿಲ್ಲ. ರೋಗಲಕ್ಷಣಗಳ ಆಧಾರದ ಮೇಲೆ ಸಂಭವನೀಯ ರೋಗನಿರ್ಣಯವನ್ನು ಮಾಡಲಾಗುತ್ತದೆ. ಈ ಸ್ಥಿತಿಯು ಮಾರಣಾಂತಿಕವೂ ಹೌದು, ಏಕೆಂದರೆ MEಗೆ ಯಾವುದೇ ಚಿಕಿತ್ಸೆ ಇಲ್ಲ.

ಮಿಲ್ಲಿ ಸ್ಥಿತಿ ಕೂಡ ಗಂಭೀರವಾಗಿದೆ. ಆಕೆಗೆ ನಡೆಯಲು ಅಥವಾ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಾತನಾಡುವುದೂ ಅಸಾಧ್ಯ. ಏನನ್ನಾದರೂ ನುಂಗಲು ಸಹ ಹೆಣಗಾಡುತ್ತಾಳೆ. ಸ್ಪರ್ಶ, ಶಬ್ದ ಮತ್ತು ಬೆಳಕಿನ ಸಂವೇದನೆಯು ಅವಳಿಗೆ ಅಸಹನೀಯವಾಗುತ್ತದೆ. ಏಕೆಂದರೆ ಅವಳ ಸಂವೇದನಾ ಶಕ್ತಿ ಬಹಳ ದುರ್ಬಲವಾಗಿದೆ.

ಜನವರಿಯಲ್ಲಿ ಮಿಲ್ಲಿಗೆ ಈ ಕಾಯಿಲೆಯಿದೆ ಎಂಬುದು ಖಚಿತಪಟ್ಟಿತ್ತು. ಆಸ್ಪತ್ರೆಗೂ ದಾಖಲಿಸಲಾಯ್ತು. ಅವಳನ್ನು ಉಳಿಸಿಕೊಳ್ಳಲು ಫೀಡಿಂಗ್ ಟ್ಯೂಬ್‌ಗಳನ್ನು ಅಳವಡಿಸಲಾಗಿದೆ. ತಾನು ಸಾಯುತ್ತಿದ್ದೇನೆ, ಸಹಾಯ ಮಾಡಿ ಎಂದಾಕೆ ವೈದ್ಯರನ್ನು ಅಂಗಲಾಚಿದ್ದಳು.

ಮಿಲ್ಲಿಗೆ 2019ರಲ್ಲಿಯೇ ಈ ರೋಗಲಕ್ಷಣಗಳು ಕಾಣಿಸಿಕೊಂಡಿದ್ದವು. ವರ್ಷದಿಂದ ವರ್ಷಕ್ಕೆ ಆಕೆಯ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಡಿಸೆಂಬರ್ 2023 ರಲ್ಲಿ ಆಕೆಯ ದೈಹಿಕ ಸಾಮರ್ಥ್ಯವು ತೀವ್ರವಾಗಿ ಕುಸಿದಿತ್ತು. ಹಾಗಾಗಿ ಈ ವರ್ಷ ಜನವರಿ 30 ರಂದು ಅವಳನ್ನು ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಆಕೆ ಮಲಗಿರುವ ಸ್ಥಾನದಿಂದ ಎದ್ದಾಗಲೆಲ್ಲಾ ಎದ್ದ ನಂತರ ರಕ್ತದ ಪ್ರಮಾಣವು ತುಂಬಾ ಕಡಿಮೆಯಾಗಿ ಹೃದಯಕ್ಕೆ ಮರಳುತ್ತದೆ. ಹಾಗಾಗಿ ಅವಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...