ಇಂಡಿಯಾ ಅಂಡ್ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿರುವ ಕಲಾವಿದ ದಿಲೀಪ್ ಮೊಹಪಾತ್ರಾ ಶ್ರೀ ಜಗನ್ನಾಥ ದೇಗುಲದ ತದ್ರೂಪನ್ನು ಮರದಿಂದ ರಚಿಸಿದ್ದಾರೆ.
ಒಡಿಶಾದ ಬೆಹ್ರಾಂಪುರದ 18 ವರ್ಷ ವಯಸ್ಸಿನ ದಿಲೀಪ್ ಇದುವರೆಗೂ ಒಮ್ಮೆಯೂ ಸಹ ದೇವಸ್ಥಾನಕ್ಕೆ ಭೇಟಿ ಕೊಟ್ಟಿಲ್ಲ. ಆದರೂ ಸಹ ತನ್ನ ಚಿಕ್ಕಪ್ಪನ ಸಹಾಯದಿಂದ ಈ ಕಲಾಕೃತಿ ರಚಿಸಿದ್ದಾರೆ.
ನಾಲ್ಕು ಇಂಚಿನ ಪಾಯದ ಮೇಲೆ 5.5 ಇಂಚು ಉದ್ದದ ಮಿನಿ ದೇಗುಲ ರಚಿಸಿದ ದಿಲೀಪ್, ಈ ರಚನೆ ಮೇಲೆ ಸಿಂಹ, ಕುದುರೆ, ಆನೆ, ಹುಲಿಗಳನ್ನು ಕೆತ್ತಿರುವುದಲ್ಲದೇ ಪುಟ್ಟ ದೇಗುಲಗಳು, ಗೇಟ್‌ಗಳು ಹಾಗೂ ಸ್ತಂಭವನ್ನೂ ಕೆತ್ತಿದ್ದಾರೆ. ಈ ದೇವಸ್ಥಾನ ನಿರ್ಮಾಣಕ್ಕೆ ದಿಲೀಪ್ ತಿಂಗಳಿಗೂ ಹೆಚ್ಚು ಸಮಯ ಶ್ರಮಿಸಿದ್ದಾರೆ.