ಇತ್ತೀಚೆಗಷ್ಟೆ ಮಧ್ಯಪ್ರದೇಶದಲ್ಲಿ ಕೇವಲ 18 ತಿಂಗಳ ಮಗು ಚಹಾ ಕುಡಿದು ಸಾವನ್ನಪ್ಪಿದೆ ಎಂಬ ವರದಿ ಪ್ರಕಟವಾಗಿತ್ತು. ಇದು ನಿಜಕ್ಕೂ ಆಘಾತಕಾರಿ ಸಂಗತಿ. ಭಾರತದಲ್ಲಿ ಚಹಾವನ್ನು ಬಹಳ ಮುಖ್ಯವಾದ ಮತ್ತು ಶಕ್ತಿ ನೀಡುವ ಪಾನೀಯವೆಂದು ಕರೆಯಲಾಗುತ್ತದೆ. ಇಂತಹ ಸಂದರ್ಭದಲ್ಲಿ ಚಹಾ ಸೇವನೆಯಿಂದ ಸಾವು ಸಂಭವಿಸಬಹುದೇ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.
ಚಹಾವು ಉತ್ತಮ ಪಾನೀಯವಾಗಿದ್ದರೂ, ಅನೇಕ ಸಂದರ್ಭಗಳಲ್ಲಿ ಮತ್ತು ಕೆಲವು ವಯಸ್ಸಿನಲ್ಲಿ ಇದು ದೇಹಕ್ಕೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ. ವಿಶೇಷವಾಗಿ ಮಕ್ಕಳಲ್ಲಿ ಚಹಾವು ಅನೇಕ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು.
ಚಹಾದಲ್ಲಿರುವ ಕೆಫೀನ್ನಿಂದ ಮಕ್ಕಳಿಗೆ ಹಾನಿ
ಚಹಾದಲ್ಲಿರುವ ಕೆಫೀನ್ ಅನ್ನು ಉತ್ತೇಜಕ ಎಂದು ಕರೆಯಲಾಗುತ್ತದೆ. ಚಿಕ್ಕ ಮಕ್ಕಳ ದೇಹವು ಸೂಕ್ಷ್ಮವಾಗಿರುತ್ತದೆ, ಕೆಫೀನ್ ಸೇವಿಸುವುದರಿಂದ ಅವರ ದೇಹಕ್ಕೆ ಹಾನಿಯಾಗುತ್ತದೆ. ಅನೇಕ ಕಡೆ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಚಹಾ ಅಥವಾ ಕೆಫೀನ್ಯುಕ್ತ ಪಾನೀಯ ಕುಡಿಯುವುದನ್ನು ನಿಷೇಧಿಸಲಾಗಿದೆ. ಚಿಕ್ಕ ಮಗುವಿನ ದೇಹಕ್ಕೆ ಕೆಫೀನ್ ಪ್ರವೇಶಿಸಿದರೆ ಮಗುವಿನ ನಿದ್ದೆಗೆ ತೊಂದರೆಯಾಗಬಹುದು.
ಕೆಫೀನ್ ಸೇವನೆಯಿಂದ ಮಕ್ಕಳ ದೇಹದಲ್ಲಿ ದೌರ್ಬಲ್ಯ, ಚಡಪಡಿಕೆ, ಮೂತ್ರ ಉತ್ಪಾದನೆ ಹೆಚ್ಚುತ್ತದೆ. ದೇಹದಲ್ಲಿ ಸೋಡಿಯಂ ಜೊತೆಗೆ ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ. ಚಹಾದಲ್ಲಿರುವ ಕೆಫೀನ್ನ ಬಲವಾದ ಪರಿಣಾಮವು ಮಗುವಿನ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯದ ಮೇಲಾಗುತ್ತದೆ. ಅದಕ್ಕಾಗಿಯೇ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಚಹಾ ಕುಡಿಯಬಾರದು.
ಆದರೆ ಭಾರತದಲ್ಲಿ ಅನೇಕ ಮಕ್ಕಳು ಹಾಲು ಕುಡಿಯಲು ಇಷ್ಟಪಡುವುದಿಲ್ಲ. ತಾಯಂದಿರು ಹಾಲಿನಲ್ಲಿ ಚಹಾವನ್ನು ಬೆರೆಸಿ ಅವರಿಗೆ ಕುಡಿಯಲು ನೀಡುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು ಎನ್ನುತ್ತಾರೆ ಆರೋಗ್ಯ ತಜ್ಞರು. ಕೆಫೀನ್ನಂತಹ ಅಂಶವನ್ನು ಮಕ್ಕಳಿಂದ ದೂರವಿಟ್ಟಷ್ಟೂ ಉತ್ತಮ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.