alex Certify 1.5 ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ ಈ ವಿಡಿಯೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1.5 ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ ಈ ವಿಡಿಯೋ..!

17 ವರ್ಷದ ಬಾಲಕನೊಬ್ಬ ವಿವಿಧ ಕಾರ್ಯಕ್ರಮಗಳಲ್ಲಿ ಪಾತ್ರ ನಿರ್ವಹಿಸಿರುವ ಸೆಲೆಬ್ರಿಟಿಗಳನ್ನು ಅನುಕರಣೆ ಮಾಡಿದ್ದು, ಈ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದೀಗ ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳೊಂದಿಗೆ ಸಖತ್ ವೈರಲ್ ಆಗಿದೆ.

ಬಾಲಿವುಡ್ ಸೆಲೆಬ್ರಿಟಿಗಳ ತಮಾಷೆಯ ಮಿಮಿಕ್ರಿಗೆ ಹೆಸರುವಾಸಿಯಾದ ಇನ್‌ಸ್ಟಾರ್‌ಗ್ರಾಮ್ ಬಳಕೆದಾರ ರೋನಿತ್ ಅಶ್ರಾ ಅವರು ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಅವರು, ಕಾರ್ಯಕ್ರಮದ ವಿವಿಧ ಜನಪ್ರಿಯ ದೃಶ್ಯಗಳನ್ನು ಅಭಿನಯಿಸಿದ್ದಾರೆ. ಜೋಯಿ ಚಾಂಡ್ಲರ್‌ನ ಎಲ್ಲಾ ಬಟ್ಟೆಗಳನ್ನು ಧರಿಸುವುದರಿಂದ ಹಿಡಿದು ಜಾನಿಸ್‌ನ ವಿಚಿತ್ರ ನಗುವನ್ನು ಅನುಕರಿಸುವವರೆಗೆ ರೋನಿತ್ ಎಲ್ಲವನ್ನೂ ಕೂಡ ಅದೇ ರೀತಿ ಮಾಡಿದ್ದಾರೆ.

ರಾಜಕೀಯ ದ್ವೇಷಕ್ಕೆ ಹೆಸರಾದ ಬಂಗಾಳದಲ್ಲಿ ಮತ್ತೊಂದು ಮರ್ಡರ್: ತಡರಾತ್ರಿ ಫೈರಿಂಗ್ ನಲ್ಲಿ ಟಿಎಂಸಿ ಮುಖಂಡನ ಹತ್ಯೆ

ಅಷ್ಟೇ ಅಲ್ಲ, ಪ್ರತಿಯೊಂದು ಪಾತ್ರ ಅನುಕರಣೆ ಮಾಡುವಾಗಲೂ ರೋನಿತ್, ಸೆಲೆಬ್ರಿಟಿ ಯಾವ ಬಟ್ಟೆ ತೊಟ್ಟಿದ್ದಾರೋ ಅದೇ ರೀತಿ ಬಟ್ಟೆ ತೊಟ್ಟಿದ್ದಾರೆ. ಯುವತಿಯರ ಪಾತ್ರ ಅನುಕರಣೆ ಮಾಡುವಾಗ ಡಿಟ್ಟೋ ಯುವತಿಯರು ತೊಡುವ ಬಟ್ಟೆಯನ್ನೇ ತೊಟ್ಟಿರುವುದು ವಿಶೇಷ.

ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ರೋನಿತ್, ತಾನು ಇನ್ನೂ ಹೆಚ್ಚಿನ ಬಟ್ಟೆಗಳನ್ನು ಧರಿಸಬಹುದೇ? ಎಂದು ಶೀರ್ಷಿಕೆ ನೀಡಿದ್ದಾರೆ. ರೋನಿತ್ ಅಭಿನಯಕ್ಕೆ ನೆಟ್ಟಿಗರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...