ಭಾರತದ ಮೊದಲ ಟಿ ಟ್ವೆಂಟಿ ವಿಶ್ವ ಕಪ್ ಗೆದ್ದ ದಿನಕ್ಕೆ 17 ವರ್ಷದ ಸಂಭ್ರಮ 24-09-2024 1:40PM IST / No Comments / Posted In: Featured News, Live News, Sports 2007 ಸೆಪ್ಟೆಂಬರ್ 24ರಂದು ಎಂ ಎಸ್ ಧೋನಿ ನಾಯಕತ್ವದ ಭಾರತ ತಂಡ ಮೊಟ್ಟ ಮೊದಲ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಕ್ಯಾಪ್ಟನ್ ಕೂಲ್ ಎಂದೆ ಖ್ಯಾತಿ ಪಡೆದಿರುವ ಧೋನಿಯವರ ನಾಯಕತ್ವಕ್ಕೆ ಕ್ರಿಕೆಟ್ ಪ್ರೇಮಿಗಳು ಫಿದಾ ಆಗಿದ್ದರು. ಇಂದಿಗೆ 17 ವರ್ಷಗಳಾಗಿದ್ದು, ಮಾಜಿ ಕ್ರಿಕೆಟಿಗರು ಗೆದ್ದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಟಿ20 ವಿಶ್ವಕಪ್ ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಕೇವಲ 157 ರನ್ಗಳ ಸಾಧಾರಣ ಮೊತ್ತ ದಾಖಲಿಸಿತ್ತು. ಈ ಪಂದ್ಯದಲ್ಲಿ ಗೌತಮ್ ಗಂಭೀರ್ 75 ರನ್ ಬಾರಿಸುವ ಮೂಲಕ. ಭರ್ಜರಿ ಪ್ರದರ್ಶನ ತೋರಿದರು. ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಆರಂಭದಲ್ಲೇ ವಿಕೆಟ್ಗಳನ್ನು ಕಳೆದುಕೊಳ್ಳುವ ಮೂಲಕ ಸಂಕಷ್ಟದಲ್ಲಿ ಸಿಲುಕಿತ್ತು. ಭಾರತದ ಪ್ರಮುಖ ಬೌಲರ್ಗಳಾದ ಅರ್ಪಿಸಿಂಗ್, ಇರ್ಫಾನ್ ಪಠಾಣ್ ಹಾಗೂ ಜೋಗಿನ್ದರ್ ಶರ್ಮ, ಪಾಕಿಸ್ತಾನಿ ಬ್ಯಾಟ್ಸ್ ಮ್ಯಾನ್ ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ಕೊನೆಯ ಹಂತದವರೆಗೂ ರೋಚಕತೆಯಿಂದ ಸಾಗಿದ ಈ ಪಂದ್ಯದ ಅಂತಿಮ ಓವರ್ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಕೇವಲ ಐದು ರನ್ ಗಳಿಂದ ಭಾರತ ಈ ಪಂದ್ಯವನ್ನು ಗೆಲ್ಲುವ ಮೂಲಕ ಟಿ 20 ವಿಶ್ವ ಕಿರೀಟ ಅಲಂಕರಿಸಿದರು. 🗓️ #OnThisDay in 2007! The @msdhoni-led #TeamIndia created 𝙃𝙄𝙎𝙏𝙊𝙍𝙔 as they lifted the ICC World Twenty20 Trophy 🏆👏 pic.twitter.com/ICB0QmxhjP — BCCI (@BCCI) September 24, 2024