ತನ್ನ ತಂದೆಗೆ ಯಕೃತ್ತಿನ (ಲಿವರ್) ಭಾಗವೊಂದನ್ನು ದಾನ ಮಾಡುವ ಮೂಲಕ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ಬಾಲಕಿ, ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೇರಳದ ತ್ರಿಶೂರಿನಲ್ಲಿ ಇಂತಹ ಅಪರೂಪದ ಘಟನೆ ನಡೆದಿದ್ದು, 17 ವರ್ಷದ ದೇವನಂದ ತಮ್ಮ ತಂದೆ 48 ವರ್ಷದ ಪ್ರತೀಶ್ ಅವರಿಗೆ ಯಕೃತ್ತು ದಾನ ಮಾಡಿದ್ದು, ತಂದೆ – ಮಗಳು ಈಗ ಆರೋಗ್ಯವಾಗಿದ್ದಾರೆ.
ಭಾರತದ ಕಾನೂನಿನ ಪ್ರಕಾರ ಅಪ್ರಾಪ್ತರು ಅಂಗಾಂಗ ದಾನ ಮಾಡುವಂತಿಲ್ಲ. ಆದರೆ ತನ್ನ ತಂದೆಯನ್ನು ಉಳಿಸಿಕೊಳ್ಳಬೇಕೆಂಬ ಛಲದಿಂದ ದೇವನಂದ, ತನಗೆ ಈ ನಿಯಮದಿಂದ ವಿನಾಯಿತಿ ನೀಡುವಂತೆ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು.
ಹೈಕೋರ್ಟ್ ಅನುಮತಿ ನೀಡಿದ ಬಳಿಕ ಪ್ರತೀಶ್ ಅವರಿಗೆ ಅಳುವಾದ ರಾಜಗಿರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ತಂದೆ ಮೇಲೆ ಮಗಳಿಗಿರುವ ಮಮತೆಯನ್ನು ಮೆಚ್ಚಿಕೊಂಡಿರುವ ಆಸ್ಪತ್ರೆ ಆಡಳಿತ ಮಂಡಳಿ ಶಸ್ತ್ರ ಚಿಕಿತ್ಸೆಗೆ ತಗುಲಿದ ಸಂಪೂರ್ಣ ವೆಚ್ಚವನ್ನು ಮನ್ನಾ ಮಾಡಿದೆ.