alex Certify ವಿಮಾನದಲ್ಲಿ ಏಕಾಂಗಿಯಾಗಿ ವಿಶ್ವದಾದ್ಯಂತ ಸಂಚರಿಸಿ ದಾಖಲೆ ಬರೆದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದಲ್ಲಿ ಏಕಾಂಗಿಯಾಗಿ ವಿಶ್ವದಾದ್ಯಂತ ಸಂಚರಿಸಿ ದಾಖಲೆ ಬರೆದ ಯುವಕ

17 ವರ್ಷದ ಪೈಲಟ್​ ಮ್ಯಾಕ್​ ರುದರ್​ಫೋರ್ಡ್​ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ. ಸಣ್ಣ ವಿಮಾನದಲ್ಲಿ ಐದು ತಿಂಗಳ ಹಿಂದೆ ಪ್ರಾರಂಭವಾದ ಅವರ ಪ್ರಯಾಣ, ಬಲ್ಗೇರಿಯಾದಲ್ಲಿ ಕೊನೆಗೊಂಡಿತು. ಪಂಚದಾದ್ಯಂತ ಏಕಾಂಗಿಯಾಗಿ ಹಾರಾಟ ನಡೆಸಿದ ಅತ್ಯಂತ ಕಿರಿಯ ವ್ಯಕ್ತಿ ಎಂದೆನಿಸಿಕೊಂಡರು.

ಬೆಲ್ಜಿಯಂ ಮತ್ತು ಯುನೈಟೆಡ್​ ಕಿಂಗ್​ಡಮ್​ನ ಪ್ರಜೆಯಾದ ಮ್ಯಾಕ್​ ರುದರ್​ಫೋರ್ಡ್​ ತಮ್ಮ ಸಾಧನೆಯ ಬಳಿಕ ಪ್ರತಿಕ್ರಿಯೆ ನೀಡಿ, “ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಎಷ್ಟೇ ವಯಸ್ಸಾಗಿದ್ದರೂ, ಕಷ್ಟಪಟ್ಟು ಕೆಲಸ ಮಾಡಿ. ನಿಮ್ಮ ಗುರಿಗಳನ್ನು ಮುಟ್ಟುವವರೆಗೂ ಮುಂದುವರಿಯಿರಿ” ಎಂದು ಹೇಳಿದರು.

19ನೇ ವಯಸ್ಸಿನಲ್ಲಿ ಜನವರಿಯಲ್ಲಿ ತನ್ನದೇ ಆದ ಜಾಗತಿಕ ಹಾರಾಟವನ್ನು ಮುಗಿಸಿದ ಅವರ ಸಹೋದರಿ ಜರಾ, ಈ ಹಿಂದೆ ಅಲ್ಟ್ರಾಲೈಟ್​ ದಾಖಲೆಯನ್ನು ಹೊಂದಿದ್ದರು.

ಮಾರ್ಚ್​ 23 ರಂದು ಪ್ರಾರಂಭವಾದ ಪ್ರಯಾಣವು ಐದು ಖಂಡಗಳ 52 ದೇಶಗಳಲ್ಲಿ ಸಾಗಿದರು. ಪ್ರವಾಸದ ಸಮಯದಲ್ಲಿ ಅವರು 17 ವರ್ಷಕ್ಕೆ ಕಾಲಿಟ್ಟರು ಎಂಬುದು ಗಮನಾರ್ಹ ಸಂಗತಿ.

ಏವಿಯೇಟರ್​ಗಳ ಕುಟುಂಬದಲ್ಲಿ ಜನಿಸಿದ ಅವರು 2020ರಲ್ಲಿ ಪೈಲಟ್​ ಪರವಾನಗಿಗೆ ಅರ್ಹತೆ ಪಡೆದಿದ್ದರು. ಆ ಸಮಯದಲ್ಲಿ ಅವರನ್ನು 15 ನೇ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಕಿರಿಯ ಪೆೈಲಟ್​ ಎಂದು ಗುರುತಿಸಲಾಗಿತ್ತು.

ಸಣ್ಣ ವಿಮಾನದಲ್ಲಿ ಸಾಮಾನ್ಯವಾಗಿ ಎರಡು ಆಸನಗಳಿರುತ್ತವೆ. ಆದರೆ ಇವರು ಬಳಸಿದ ವಿಮಾನದಲ್ಲಿ ಎರಡನೇ ಆಸನದ ಜಾಗವನ್ನು ಹೆಚ್ಚುವರಿ ಇಂಧನ ಟ್ಯಾಂಕ್​ಗೆ ಬಳಸಿಕೊಳ್ಳಲಾಗಿತ್ತು.

ಆರಂಭದಲ್ಲಿ ಪ್ರವಾಸವು ಮೂರು ತಿಂಗಳವರೆಗೆ ತೆಗೆದುಕೊಳ್ಳಬಹುದು ಎಂದು ಯೋಜಿಸಲಾಗಿತ್ತು, ಮಾನ್ಸೂನ್​ ಮಳೆ, ಮರಳು ಬಿರುಗಾಳಿಗಳು ಮತ್ತು ವಿಪರೀತ ಶಾಖ ಸೇರಿದಂತೆ ಹಲವಾರು ಅನಿರೀಕ್ಷಿತ ಅಡೆತಡೆಗಳಿಂದಾಗಿ ಹೆಚ್ಚು ಕಾಲ ಮುಂದುವರಿಯಿತು.

ಪರವಾನಿಗೆ ಮತ್ತು ಮುಂದಿನ ಹಾರಾಟಕ್ಕೆ ಅಗತ್ಯವಿರುವ ಇತರ ದಾಖಲೆ ಪಡೆಯಲು ಹೆಚ್ಚಿನ ವಿಳಂಬ ಉಂಟಾಯಿತು. ಕೆಲವು ಸಂದರ್ಭದಲ್ಲಿ ನಿಗದಿತ ಮಾರ್ಗವನ್ನು ಬದಲಾಯಿಸಬೇಕಾಗಿತ್ತು.

ಕೊನೆಯಲ್ಲಿ ರುದರ್​ಫೋರ್ಡ್​ ಅವರನ್ನು ಸ್ವಾಗತಿಸಲು ಮತ್ತು ಅವರ ಸಾಧನೆಗಳನ್ನು ಸಂಭ್ರಮಿಸಲು ಅಪಾರ ಸಂಖ್ಯೆಯ ಜನರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...