alex Certify ಡ್ಯಾನ್ಸ್​ ಬಾರ್​ ಮೇಲೆ ಸಿನಿಮೀಯ ರೀತಿಯಲ್ಲಿ ಪೊಲೀಸರ ದಾಳಿ: ಮಹಿಳೆಯರ ರಕ್ಷಣೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ಯಾನ್ಸ್​ ಬಾರ್​ ಮೇಲೆ ಸಿನಿಮೀಯ ರೀತಿಯಲ್ಲಿ ಪೊಲೀಸರ ದಾಳಿ: ಮಹಿಳೆಯರ ರಕ್ಷಣೆ…..!

ಡ್ಯಾನ್ಸ್​ ಬಾರ್​ ಒಂದರ ಮೇಲೆ ನಡೆಸಿದ ದಾಳಿಯಲ್ಲಿ 17 ಮಂದಿ ಮಹಿಳೆಯರನ್ನು ರಕ್ಷಿಸಿದ ಘಟನೆಯು ಮುಂಬೈನ ಅಂಧೇರಿಯಲ್ಲಿ ನಡೆದಿದೆ. ಮೇಕಪ್​ ರೂಮ್​​ಗೆ ಕನೆಕ್ಟ್​ ಆಗಿದ್ದ ಬೇಸ್​ಮೆಂಟ್​ನಲ್ಲಿರುವ ರಹಸ್ಯಕೋಣೆಯೊಂದರಲ್ಲಿ ಈ ಮಹಿಳೆಯರನ್ನು ಇರಿಸಲಾಗಿತ್ತು. ದಾಳಿ ನಡೆಯುವುದು ಗಮನಕ್ಕೆ ಬರುತ್ತಿದ್ದಂತೆಯೇ ಡ್ಯಾನ್ಸ್​ ಬಾರ್​ನ ಮಾಲೀಕರು ಸುಧಾರಿತ ಎಲೆಕ್ಟ್ರಾನಿಕ್​ ಸಾಧನದಿಂದ ದಾಳಿಯ ಬಗ್ಗೆ ಎಚ್ಚರಿಸಿದ್ದರು ಎನ್ನಲಾಗಿದೆ.

ಅಂಧೇರಿಯಲ್ಲಿರುವ ದೀಪಾ ಬಾರ್​ ಮೇಲೆ ಈ ದಾಳಿಯನ್ನು ನಡೆಸಲಾಗಿದೆ. ಗ್ರಾಹಕರ ಎದುರು ಮಹಿಳೆಯರಿಂದ ನೃತ್ಯ ಮಾಡಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿದ ಪೊಲೀಸರು ಶನಿವಾರ ಈ ದಾಳಿಯನ್ನು ನಡೆಸಿದ್ದಾರೆ. ಆದರೆ ದಾಳಿಯ ಆರಂಭದಲ್ಲಿ ಯಾವುದೂ ಪೊಲೀಸರು ಅಂದುಕೊಂಡಂತೆ ನಡೆಯಲಿಲ್ಲ. ಸ್ನಾನಗೃಹ, ಸ್ಟೋರ್​ ರೂಮ್​, ಅಡುಗೆ ಮನೆ ಹೀಗೆ ಎಲ್ಲಿ ಹುಡುಕಿದರೂ ಯುವತಿಯರು ಪತ್ತೆಯಾಗಿರಲಿಲ್ಲ.

ಇದಾದ ಬಳಿಕ ಪೊಲೀಸರು ಬಾರ್ ಮ್ಯಾನೇಜರ್​, ಕ್ಯಾಶಿಯರ್​ ವೇಯ್ಟರ್​ ಸೇರಿದಂತೆ ಯಾರನ್ನೇ ವಿಚಾರಣೆಗೆ ಒಳಪಡಿಸಿದರೂ ಒಬ್ಬರೂ ಕೂಡ ಮಾಹಿತಿಯನ್ನು ಬಾಯ್ಬಿಟ್ಟಿರಲಿಲ್ಲ. ಈ ವೇಳೆಯಲ್ಲಿ ಮೇಕಪ್​ ರೂಮ್​​ನಲ್ಲಿದ್ದ ದೊಡ್ಡ ಕನ್ನಡಿಯು ಪೊಲೀಸರ ಕಣ್ಣಿಗೆ ಬಿದ್ದಿದೆ. ಕನ್ನಡಿಯನ್ನು ತೆಗೆಯುವುದು ಕಷ್ಟವಾದ್ದರಿಂದ ಸುತ್ತಿಗೆ ಸಹಾಯದಿಂದ ಕನ್ನಡಿಯನ್ನು ಒಡೆಯಬೇಕಾಯ್ತು. ಈ ವೇಳೆ ರಹಸ್ಯ ಕೋಣೆಯು ಪೊಲೀಸರ ಕಣ್ಣಿಗೆ ಬಿದ್ದಿದೆ. ಬಾರ್​ ಮ್ಯಾನೇಜರ್, ಕ್ಯಾಶಿಯರ್​ ಸೇರಿದಂತೆ ಅನೇಕರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy pro domácnost, vaření a zahradničení: objevte nejlepší triky a recepty pro každodenní život! Odstranění filmu a odstranění zápachu: Jak Proč prádlo zatuchlí a jak problém řešit: hlavní 5 důvodů, proč je kovová spona Jak psi Jak rozpoznat nejčastější poruchy Jak se zbavit zápachu z toalety: pětiminutové tipy pro svěží Výhody a nevýhody obilovin: 7 druhů kaší, Dnešní svátek, Proč se kočka skrčí: odpověď vás rozesměje Jak rychle zvýšit sebevědomí: Tipy od Nebezpečný nepřítel ve vaší koupelně: růžový plísně ohrožuje vaše zdraví 6 tipů jak zabránit připálení spodní 6 tajemství Bobule pro zdravé srdce a mozku: dvě porce denně Domácí výroba pracího prášku bez chemikálií: recepty na mýdlový prášek : Nejlahodnější roláda s vajíčkem a sýrem: Chebureky: recept, Jak rychle vyčistit houbičku Pět šťastných keřů okolo domu: jak Proč řidiči stále častěji Proč přidávat ocet do prádla: Neznámý trik, Chcete zjistit nové triky, jak ušetřit čas v kuchyni nebo zlepšit svůj záhradní trénink? Navštivte náš web plný užitečných tipů a triků pro každodenní život! Zde najdete nejnovější informace o receptech, kuchařských trikách a zahradnických nápadech, které vám pomohou vytvořit skvělé jídlo a úspěšný záhradní projekt. Připojte se k nám a získávejte inspiraci každý den!