
ಪಾಕಿಸ್ತಾನದಿಂದ ಆಗಮಿಸಿದ 17 ಹಿಂದು ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ನೀಡಲಾಗಿದೆ ಎಂದು ಅಹಮದಾಬಾದ್ ಜಿಲ್ಲಾಧಿಕಾರಿ ಸಂದೀಪ್ ಸಾಗಲೆ ತಿಳಿಸಿದ್ದಾರೆ.
ಅವರು ಪಾಕಿಸ್ತಾನದಿಂದ ಬಂದ ಹಿಂದು ನಿರಾಶ್ರಿತರೊಂದಿಗೆ ಶನಿವಾರ ಸಂವಾದ ನಡೆಸಿದರು. ಭಾರತ ಶಾಂತಿಯ ನಾಡು. ಇಲ್ಲಿ ಶಾಂತಿಯ ಅನುಭವ ಸದಾ ಇರುತ್ತದೆ ಎಂದು ನಿರಾಶ್ರಿತರ ಪೈಕಿ ಒಬ್ಬರು ಹೇಳಿದರು. ಇದೇ ವೇಳೆ ಭಾರತೀಯ ಪೌರತ್ವವನ್ನು ನೀಡುವಲ್ಲಿ ತರ್ಕಬದ್ಧತೆಯನ್ನು ತೋರಿಸಿದ್ದಕ್ಕಾಗಿ ಅಹಮದಾಬಾದ್ ಜಿಲ್ಲಾಡಳಿತಕ್ಕೆ ನಿರಾಶ್ರಿತರು ಧನ್ಯವಾದಗಳನ್ನು ಅರ್ಪಿಸಿದರು.
ನಿರ್ಮಲಾ ಸೀತಾರಾಮನ್ ಅವರ ಸರಳತೆಗೆ ತಲೆದೂಗಿದ ನೆಟ್ಟಿಗರು
ಪೌರತ್ವ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ, ಏಳು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಭಾರತದಲ್ಲಿ ವಾಸಿಸುವ ವಿದೇಶಿ ಪ್ರಜೆಗಳು ಸರಿಯಾದ ಸಾಂವಿಧಾನಿಕ ಕಾರ್ಯವಿಧಾನವನ್ನು ಅನುಸರಿಸಿದ ನಂತರ ಪೌರತ್ವವನ್ನು ಪಡೆಯುತ್ತಾರೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.