alex Certify ಮದುವೆಯಾದ 17 ದಿನಗಳಲ್ಲೇ ತವರು ಸೇರಿದ ವಧು; ಬಳಿಕ ಬಂದ ಫೋಟೋ ನೋಡಿ ಪತಿಗೆ ಶಾಕ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ 17 ದಿನಗಳಲ್ಲೇ ತವರು ಸೇರಿದ ವಧು; ಬಳಿಕ ಬಂದ ಫೋಟೋ ನೋಡಿ ಪತಿಗೆ ಶಾಕ್…!

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನವವಿವಾಹಿತ ವಧು ಮದುವೆಯಾದ ಕೇವಲ 17 ದಿನಗಳ ನಂತರ ಗಂಡನ ಮನೆ ತೊರೆದು ಎಸ್ಕೇಪ್ ಆಗಿದ್ದಾಳೆ. ಹೋಗುವಾಗ ಚಿನ್ನಾಭರಣ, ಹಣ ತೆಗೆದುಕೊಂಡು ಕಾಲ್ಕಿತ್ತಿದ್ದಾಳೆ. ಈ ವಿಷಯ ತಿಳಿದು ಮನೆಗೆ ಬರುವಂತೆ ಗಂಡ ಪದೇ ಪದೇ ಕರೆಯುತ್ತಿದ್ದರೂ ವಾಪಸ್ ಬರದ ಆಕೆ ತಾನು ಮತ್ತೊಬ್ಬನನ್ನು ಮದುವೆಯಾಗಿರುವುದಾಗಿ ಹೇಳಿದ್ದಾಳೆ. ಆದರೆ ಪತ್ನಿಯ ಮದುವೆ ವಿಷಯ ತಿಳಿದ ಗಂಡನಿಗೆ ಮತ್ತೊಂದು ಶಾಕ್ ಆಗಿದ್ದು ಆಕೆ ತನ್ನನ್ನು ಮದುವೆಯಾಗುವ ಮುನ್ನವೇ ಬೇರೊಬ್ಬನೊಂದಿಗೆ ಮದುವೆಯಾಗಿದ್ದಳು ಎಂಬ ಸತ್ಯ ಅರಿವಾಗಿದೆ. ಇದಕ್ಕಾಗಿ ನ್ಯಾಯ ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಪ್ರಯೋಜನವಾಗದಿದ್ದಾಗ ಎಸ್ ಪಿ ಮೊರೆ ಹೋಗಿದ್ದಾರೆ.

ಜನಕ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇಲ್ಲಿನ ಗೋಲ್ ಪಹಾಡಿಯಾ ಜನಕಪುರಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಸಂತೋಷ್ ಪ್ರಜಾಪತಿ ಎಂಬ ವ್ಯಕ್ತಿ ನಿತಿನ್ ಪ್ರಜಾಪತಿ ಮತ್ತು ಅಂಜಲಿ ಕುಶ್ವಾಹ ಎಂಬ ಮಧ್ಯವರ್ತಿಗಳು ತೋರಿಸಿದ್ದ ಅಂಜಲಿ ಪ್ರಜಾಪತಿ ಎಂಬುವವರೊಂದಿಗೆ ಆಗಸ್ಟ್ 2022 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡು 14 ಫೆಬ್ರವರಿ 2024 ರಲ್ಲಿ ಮದುವೆಯಾಗಿದ್ದರು. ಈ ವೇಳೆ ವಧುವಿಗೆ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಚಿನ್ನದ ಉಂಗುರ, ಚಿನ್ನದ ಕಿವಿಯೋಲೆಗಳು, ಬೆಳ್ಳಿಯ ಕಾಲುಂಗುರಗಳು, ದುಬಾರಿ ಟೈಟಾನ್ ವಾಚ್ ಮತ್ತು 11 ಸಾವಿರ ರೂಪಾಯಿ ನಗದನ್ನು ಉಡುಗೊರೆಯಾಗಿ ನೀಡಿದ್ದಾರೆ. ಮದುವೆಯಾದ 3 ದಿನಗಳ ನಂತರ ಅಂಜಲಿ ಪ್ರಜಾಪತಿಯನ್ನು ಆಕೆಯ ಪೋಷಕರು ಕರೆದೊಯ್ದರು. ಬಳಿಕ ಅತ್ತೆಯ ಮನೆಗೆ ತೆರಳಿದ ಸಂತೋಷ್ ಪತ್ನಿಯನ್ನು ಮನೆಗೆ ಕರೆತಂದಿದ್ದರು.

ಕೆಲವು ದಿನಗಳ ನಂತರ, ಏಪ್ರಿಲ್ 10 ರಂದು ಬೆಳಿಗ್ಗೆ ಕೆಲಸಕ್ಕೆ ಹೊರಟು ಸಂಜೆ 7 ಗಂಟೆಗೆ ಹಿಂತಿರುಗಿದಾಗ ಪತ್ನಿ ಮನೆಯಲ್ಲಿ ಇರಲಿಲ್ಲ. ತನ್ನ ತಾಯಿಯ ಮನೆಗೆ ಹೋಗಿದ್ದಾಳೆಂದು ಅವರಿಗೆ ಅರಿವಾಯಿತು. ಪತ್ನಿಗೆ ಕರೆ ಮಾಡಿದಾಗ ಅವಳು ಎರಡು ಮೂರು ದಿನಗಳಲ್ಲಿ ಹಿಂತಿರುಗುವುದಾಗಿ ಹೇಳಿದಳು. ಆದರೂ ಹಿಂತಿರುಗಲಿಲ್ಲ. ಇದೇ ವೇಳೆ ಒಂದು ದಿನ ಬೀರುವಿನ ಲಾಕರ್ ಪರಿಶೀಲಿಸಿದಾಗ ಅಂಜಲಿ ಮದುವೆಯಲ್ಲಿ ನೀಡಿದ್ದ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 25 ಸಾವಿರ ನಗದು ತೆಗೆದುಕೊಂಡು ಹೋಗಿರುವುದು ಪತ್ತೆಯಾಯಿತು. ಪತ್ನಿಗೆ ಕರೆ ಮಾಡಿ ಮನೆಗೆ ಬರುವಂತೆ ಮತ್ತೆ ಕೇಳಿದಾಗ ಆಕೆ ಮೇ 15 ರಂದು ಹಿಂತಿರುಗುವುದಾಗಿ ಹೇಳಿದ್ದಾಳೆ. ಆದರೆ ಸಂಜೆ ಆಕೆಯ ತಾಯಿ ಕರೆ ಮಾಡಿ ಅಂಜಲಿ ಓಡಿ ಹೋಗಿದ್ದಾಳೆ ಎಂದು ಹೇಳಿದ್ದಾರೆ.

ಇದಾದ ಬಳಿಕ ಆಕೆ ತನ್ನ ಮದುವೆಯ ಫೋಟೋಗಳನ್ನು ಫೇಸ್ ಬುಕ್ ಮೆಸೆಂಜರ್ ಮೂಲಕ ಪತಿಗೆ ಕಳುಹಿಸಿ ನಾನು ಅಭಿಷೇಕ್ ಎಂಬುವವನನ್ನು ಮದುವೆಯಾಗಿದ್ದೇನೆಂದು ತಿಳಿಸಿದ್ದಾಳೆ. ಪತ್ನಿಯ ವಂಚನೆ ಬೆಳಕಿಗೆ ಬರ್ತಿದ್ದಂತೆ ತನ್ನ ಮದುವೆ ನಿಶ್ಚಯಿಸಿದ್ದ ನಿತಿನ್ ಹಾಗೂ ಅಂಜಲಿ ಕುಶ್ವಾಹ ಅವರನ್ನು ಸಂತೋಷ್ ಪ್ರಶ್ನಿಸಿದಾಗ, ನಾವು ಮದುವೆ ಮಾಡಿಸಿದ್ದೇವೆ ಅಷ್ಟೇ , ನಿಮ್ಮ ಪತ್ನಿ ಎಲ್ಲಿ ಹೋಗಿದ್ದಾರೆಂದು ನೋಡುವುದು ನಮ್ಮ ಕೆಲಸವಲ್ಲ ಎಂದು ಹೇಳಿದ್ದಾರೆ. ಆದರೆ ಅಂಜಲಿ 23 ಅಕ್ಟೋಬರ್ 2023 ರಂದೇ ಅಭಿಷೇಕ್ ಅವರನ್ನು ವಿವಾಹವಾಗಿರೋದಾಗಿ ಸಂತೋಷ್ ಗೆ ಅರಿವಾಯಿತು. ಈ ಮದುವೆಗೆ ನಿತಿನ್ ಮತ್ತು ಅಂಜಲಿ ಅವರು ಉಪಸ್ಥಿತರಿದ್ದು ಅವರೇ ಅಂಜಲಿ ಜೊತೆ ಸಂತೋಷ್ ಅವರ ಮದುವೆಯನ್ನು ಸಹ ಏರ್ಪಡಿಸಿದ್ದರು. ಅಂಜಲಿ ಪ್ರಜಾಪತಿ ಮದುವೆಯಾಗಿರುವುದು ಇಬ್ಬರಿಗೂ ಮೊದಲೇ ಗೊತ್ತಿತ್ತದೂ ತಮ್ಮೊಂದಿಗೆ ಅಂಜಲಿಯ ಮದುವೆ ನಿಶ್ಚಯ ಮಾಡಿದ್ದರು ಎಂದು ಸಂತೋಷ್ ಆರೋಪಿಸಿದ್ದಾರೆ.

ವಧುವಿನ ಚಿನ್ನದ ಮಂಗಳಸೂತ್ರ, ಚಿನ್ನದ ಸರ, ಚಿನ್ನದ ಮಾಲೆ, ಚಿನ್ನದ ಮೂಗುತಿ, ಬಂಗಾರದ ಓಂ ಲಾಕೆಟ್ ಚೈನ್, ಬೆಳ್ಳಿಯ ಆಭರಣಗಳು, 25 ಸಾವಿರ ರೂ., ನಿಶ್ಚಿತಾರ್ಥದ ವೇಳೆ ನೀಡಿದ್ದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ವಧು ದೋಚಿ ಪರಾರಿಯಾಗಿದ್ದಾರೆ ಎಂದು ಅವರು ಆರೋಪಿಸಿ ನ್ಯಾಯ ನೀಡುವಂತೆ ಕೋರಿದ್ದಾರೆ. ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುವಂತೆ ಎಸ್ಪಿ ಪೊಲೀಸರಿಗೆ ಆದೇಶಿಸಿದ್ದಾರೆ. ವಧು ತಪ್ಪಿತಸ್ಥಳೆಂದು ಕಂಡುಬಂದರೆ, ಆಕೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸಂತೋಷ್ ನನ್ನು ವಂಚಿಸಿ ಮದುವೆ ಮಾಡಿಕೊಟ್ಟ ಮಧ್ಯವರ್ತಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Získajte užitočné tipy a triky pre každodenný život, skvelé recepty a užitočné články o záhradkárstve. Objavte nové spôsoby, ako využiť svoj čas a zlepšiť svoj životný štýl s našimi informáciami. Buďte pripravení na všetky výzvy, ktoré vám prinesie každý deň a naučte sa, ako si uľahčiť každodenné povinnosti. So všetkými našimi tipmi budete mať vždy pod kontrolou svoj domáci a záhradkársky život. Rýchly majiteľ psa: optický klam Neuveriteľná výzva: Nájdete orla v Najspočiatku sa sústredte: 3 rozdiely, ktoré nájdete za 9 Hľadanie strateného balóna: Nájdi psa Zubné kefky: Výzva pre jastrabí zrak Obľúbené lifestylové tipy, kuchárske triky a užitočné články o záhradkárskej téme - to všetko nájdete na našej stránke plnej užitočných informácií. Urobte si život jednoduchším pomocou našich tipov a trikov, objavte nové recepty a naučte sa nové veci o pestovaní zeleniny na vašej záhrade. Buďte informovaní a inšpirovaní s naším obsahom!