ಕೃತಕ ಬುದ್ಧಿಮತ್ತೆಗಳನ್ನು ಬಳಸಿ 50%ನಷ್ಟು ಪಾಸ್‌ವರ್ಡ್‌ಗಳನ್ನು ಒಂದು ನಿಮಿಷದ ಒಳಗೆ ಪತ್ತೆ ಮಾಡಬಹುದು ಎಂದು ಅನೇಕ ಅಧ್ಯಯನ ವರದಿಗಳು ತಿಳಿಸಿರುವುದು ಸೈಬರ್ ಭದ್ರತೆ ವಿಚಾರವಾಗಿ ಇನ್ನಷ್ಟು ಕಳವಳ ಸೃಷ್ಟಿಸಿದೆ.
ಇದೇ ವೇಳೆ ಸರಾಸರಿ ಭಾರತೀಯ ಪ್ರಜೆ ಹಣಕಾಸಿನ ವಂಚನೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದು ಬಂದಿದೆ.
ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯೊಂದರಲ್ಲಿ, 30% ಭಾರತೀಯರು ತಮ್ಮ ಹಣಕಾಸು ಸಂಬಂಧಿ ಪಾಸ್‌ವರ್ಡ್‌ಗಳನ್ನು ಸ್ನೇಹಿತರು, ಕುಟುಂಬಸ್ಥರೊಂದಿಗೆ ಹಂಚಿಕೊಂಡರೆ, 88% ಮಂದಿ ಅಪ್ಲಿಕೇಶನ್‌ಗಳು, ಸಾಕ್ಷಿಗಳೂ ಹಾಗೂ ಬುಕಿಂಗ್ ಸಮಯದಲ್ಲಿ ತಮ್ಮ ಆಧಾರ್ ಕಾರ್ಡ್‌ಗಳನ್ನು ಹಂಚಿಕೊಂಡಿದ್ದಾಗಿ ತಿಳಿದು ಬಂದಿದೆ.
ಸಮೀಕ್ಷೆಯಲ್ಲಿ ಭಾಗಿಯಾದ 8% ಮಂದಿ ಸೂಕ್ಷ್ಮವಾದ ವೈಯಕ್ತಿಕ ವಿಚಾರಗಳನ್ನು ಮೊಬೈಲ್ ಫೋನ್ ನೋಟ್‌ಗಳಲ್ಲೂ, 9% ಮಂದಿ ಮೊಬೈಲ್ ಕಾಂಟಾಕ್ಟ್ ಲಿಸ್ಟ್‌ನಲ್ಲೂ ಇಟ್ಟುಕೊಳ್ಳುವುದು ತಿಳಿದು ಬಂದಿದೆ.
ಸಮೀಕ್ಷೆಯಲ್ಲಿ ಭಾಗಿಯಾದ 17%ನಷ್ಟು ಮಂದಿ ತಮ್ಮ ಬ್ಯಾಂಕ್, ಎಟಿಎಂ, ಡೆಬಿಟ್/ಕ್ರೆಡಿಟ್ ಕಾರ್ಡ್ ಪಾಸ್‌ವರ್ಡ್‌ಗಳನ್ನು ತಮ್ಮ ಮೊಬೈಲ್ ಕಾಂಟಾಕ್ಟ್ ಪಟ್ಟಿ ಅಥವಾ ಮೊಬೈಲ್ ನೋಟ್ಸ್‌ನಲ್ಲೂ ಇಟ್ಟುಕೊಳ್ಳುವುದು ತಿಳಿದು ಬಂದಿದೆ. ಸಮೀಕ್ಷೆಯಲ್ಲಿ 11,236 ಮಂದಿ ಭಾಗಿಯಾಗಿದ್ದಾರೆ.