
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಆರೋಪಿಗಳ ವಿರುದ್ಧ ಸಿಸಿಹೆಚ್ ವಿಶೇಷ ನ್ಯಾಯಾಲಯ ಆರೋಪ ನಿಗದಿ ಮಾಡಿದೆ.
ಬೆಂಗಳೂರಿನ ಸಂಘಟಿತ ಅಪರಾಧಗಳ ವಿಶೇಷ ನ್ಯಾಯಾಲಯ ಡಿಸೆಂಬರ್ 8ರಿಂದ ಗೌರಿ ಲಂಕೇಶ್ ಹತ್ಯೆ ಕೇಸ್ ವಿಚಾರಣೆ ಆರಂಭಿಸಿದ್ದು, ಇದೀಗ 17 ಆರೋಪಿಗಳ ವಿರುದ್ಧ ಆರೋಪ ನಿಗದಿಗೊಳಿಸಿದೆ.
ಆರೋಪಿಗಳಾದ ಅಮೋಲ್ ಕಾಳೆ, ಪರಶುರಾಮ್ ವಾಗ್ಮೋರೆ, ಅಮಿತ್ ಬಡ್ಡಿ, ಗಣೇಶ್ ಮಿಸ್ಕಿನ್, ಅಮಿತ್ ದೆಗ್ವೇಕರ್ ಸೇರಿ ಒಟ್ಟು 17 ಜನರ ವಿರುದ್ಧ ಎಸ್ ಐ ಟಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಐಪಿಸಿ ಸೆಕ್ಷನ್ 302, 120ಬಿ, ಆರ್ಮ್ಸ್ ಆಕ್ಟ್, ಕೋಕಾ 2000 ಕಾಯ್ದೆ ಸೇರಿ ಹಲವು ಸೆಕ್ಷನ್ ಗಳ ಅಡಿಯಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಇದೀಗ 17 ಆರೋಪಿಗಳ ಆರೋಪ ನಿಗದಿಯಾಗಿದೆ