alex Certify 17 ಗಂಟೆಗಳ ಕಾಲ ಒತ್ತೆಯಾಳಾಗಿದ್ದ ಮಹಿಳೆಯ ಜೀವ ಉಳಿಸಿದ ಆನ್ಲೈನ್ ಗೇಮ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

17 ಗಂಟೆಗಳ ಕಾಲ ಒತ್ತೆಯಾಳಾಗಿದ್ದ ಮಹಿಳೆಯ ಜೀವ ಉಳಿಸಿದ ಆನ್ಲೈನ್ ಗೇಮ್..!

ಆನ್ಲೈನ್ ನಲ್ಲಿ ಹಲವಾರು ವೈರಲ್ ಆಟಗಳು ಕಾಣಿಸಿಕೊಳ್ಳುತ್ತಿವೆ. ಯುವಜನತೆ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇದರಲ್ಲಿ ಒಗಟನ್ನು ಪರಿಹರಿಸುವ ಆಟಕ್ಕೆ ಜನರು ಮನಸೋತಿದ್ದಾರೆ. ಇಂಥದ್ದೇ ವರ್ಡ್ ಲೇ ಆಟಕ್ಕೂ ಜನರು ವ್ಯಸನಿಯಾಗಿದ್ದಾರೆ ಎಂದು ಹೇಳಿದ್ರೆ ತಪ್ಪಾಗಲಾರದು. ಇದು ಕೆಟ್ಟ ವಿಷಯ ಎಂದು ನೀವು ಭಾವಿಸುತ್ತಿದ್ದರೆ, ಈ ವೈರಲ್ ಆಟವು 80 ವರ್ಷದ ವೃದ್ಧೆಯ ಜೀವವನ್ನು ಉಳಿಸಿದೆ. ಅದು ಹೇಗೆ ಗೊತ್ತಾ..?

ಚಿಕಾಗೋದ ಲಿಂಕನ್‌ವುಡ್ ನಿವಾಸಿಯಾಗಿರುವ ಡೆನಿಸ್ ಹಾಲ್ಟ್ ಮಲಗಿದ್ದಾಗ ಮಾನಸಿಕ ಅಸ್ವಸ್ಥ ಆಕೆಯ ಮನೆಗೆ ನುಗ್ಗಿದ್ದಾನೆ. ಫೆಬ್ರವರಿ 5 ರಂದು ಈ ಘಟನೆ ಸಂಭವಿಸಿದೆ. ಒಳನುಗ್ಗಿದ 32 ವರ್ಷದ ಯುವಕ ಡೆನಿಸ್‌ಗೆ ಕತ್ತರಿ ತೋರಿಸಿ ಹೆದರಿಸಿದ್ದಾನೆ. ಹಾಗೂ ಆಕೆಯನ್ನು ನೆಲಮಾಳಿಗೆಯಲ್ಲಿ ಲಾಕ್ ಮಾಡಿದ್ದಾನೆ.

ಇದರಿಂದ ಸಾಕಷ್ಟು ಭೀತಿಗೊಂಡಿದ್ದ ಡೆನಿಸ್, ತಾನು ಬದುಕುತ್ತೇನೆ ಎಂದು ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಸಿಯಾಟಲ್‌ನಲ್ಲಿ ವಾಸಿಸುವ ಡೆನಿಸ್ ಅವರ ಹಿರಿಯ ಮಗಳು ಮೆರೆಡಿತ್, ದೈನಂದಿನ ಪದ ಒಗಟು ಆಟಕ್ಕೆ ಪರಿಹಾರವನ್ನು ತಾಯಿ ಯಾಕೆ ಕಳುಹಿಸಿಲ್ಲ ಎಂದು ಯೋಚಿಸಿದ್ದಾರೆ. ಏನೋ ತಪ್ಪಾಗಿದೆ ಎಂದರಿತ ಅವರು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ವೇಳೆ ಮನೆಯೊಳಗೆ ಹೊಕ್ಕ ಪೊಲೀಸರು, 17 ಗಂಟೆಗಳ ಕಾಲ ವೃದ್ಧೆಯನ್ನು ಬಂಧನದಲ್ಲಿಟ್ಟಿದ್ದಾತನನ್ನು ಕೂಡಲೇ ಬಂಧಿಸಿದ್ದಾರೆ. ಅದೃಷ್ಟವಶಾತ್ ಮಹಿಳೆಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅವರು ಸುರಕ್ಷಿತವಾಗಿದ್ದಾರೆ. ನೋಡಿ ಹೇಗೆ ಒಂದು ಆಟವು ಮಹಿಳೆಯನ್ನು ಕಾಪಾಡಿತು ಎಂದು ಹೇಳಿದ್ರೆ ತಪ್ಪಾಗಲಿಕ್ಕಿಲ್ಲ ಅಲ್ವಾ..?

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...