
ಬೆಂಗಳೂರು: ಇಂದಿನಿಂದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದೆ. ಇಂದು ಸಂಜೆ 5 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಲಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದು, ಚಿತ್ರೋತ್ಸವಕ್ಕೆ ಸಂಬಂಧಿಸಿದ ಐದು ಪುಸ್ತಕಗಳನ್ನು ನಟ ಶಿವರಾಜ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ.
ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿ ಕಿಶೋರ್ ಕುಮಾರ್ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5 ಖ್ಯಾತ ಸಂಗೀತ ಸಂಯೋಜಕ ಹಾಗೂ ಪಿಟೀಲು ವಾದಕ ಪದ್ಮಭೂಷಣ ಡಾ. ಎಲ್. ಸುಬ್ರಮಣ್ಯಂ ಹಾಗೂ ಖ್ಯಾತ ಕಾಯಕಿ ಪದ್ಮಶ್ರೀ ಕವಿತಾ ಸುಬ್ರಮಣ್ಯಂ ಅವರಿಂದ ಸಂಗೀತ ರಸ ಸಂಜೆ ನಡೆಯಲಿದೆ.
ನಾಳೆಯಿಂದ ಓರಾಯನ್ ಮಾಲ್ 11 ಸ್ಕ್ರೀನ್ ಗಳಲ್ಲಿ ಸಿನಿಮಾ ಪ್ರದರ್ಶನ ನಡೆಯಲಿದೆ. ರಾಜಾಜಿನಗರದ ಹೋರಾಟ ಪಿವಿಆರ್ ಸಿನಿಮಾಸ್, ಚಾಮರಾಜಪೇಟೆಯ ಡಾ. ರಾಜಕುಮಾರ್ ಭವನ, ಬನಶಂಕರಿ 2ನೇ ಹಂತದ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಪ್ರದರ್ಶನ ನಡೆಯಲಿದೆ.
ಈ ಬಾರಿ ಮಹಿಳಾ ಚಲನಚಿತ್ರದ ಬಗ್ಗೆ ನಟಿ ರಮ್ಯಾ, ನಂದಿನಿ ರೆಡ್ಡಿ ಸಂವಾದ ನಡೆಸಲಿದ್ದಾರೆ. ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. 2024 ರ ಜನಪ್ರಿಯ ಸಿನಿಮಾ ‘ಅಮರನ್’ ಚಿತ್ರದ ನಿರ್ದೇಶಕರು ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾರ್ಚ್ 3ರಂದು ಕನ್ನಡ ಸಿನಿಮಾ ಆಚರಣೆ ಸೇರಿದಂತೆ ಹಲವು ಕಾರ್ಯಕ್ರಮ ಈ ಬಾರಿ ಫಿಲಂ ಫೆಸ್ಟಿವಲ್ ನಲ್ಲಿ ಆಯೋಜಿಸಲಾಗಿದೆ.