ಶಶಾಂಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಹುತೇಕ ಲವ್ ಸ್ಟೋರಿ ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದು, 2008ರಲ್ಲಿ ತೆರೆ ಕಂಡ ‘ಮೊಗ್ಗಿನ ಮನಸ್ಸು’ ಕೂಡ ಅದೇ ಸಾಲಿಗೆ ಸೇರುತ್ತದೆ. ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್ ಹಾಗೂ ಶುಭಪುಂಜ ಅಭಿನಯದ ‘ಮೊಗ್ಗಿನ ಮನಸ್ಸು’ ಚಿತ್ರ ತೆರೆ ಮೇಲೆ ಬಂದು ಇಂದಿಗೆ 16 ವರ್ಷಗಳಾಗಿವೆ. ನಿರ್ದೇಶಕ ಶಶಾಂಕ್ ತಮ್ಮ instagram ಖಾತೆಯಲ್ಲಿ ಈ ಸಂತಸವನ್ನು ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಚಿತ್ರವನ್ನು ek ಎಂಟರ್ಟೈನ್ಮೆಂಟ್ ಬ್ಯಾನರ್ ಬ್ಯಾನರ್ ನಡಿ ek ಕೃಷ್ಣಪ್ಪ ನಿರ್ಮಾಣ ಮಾಡಿದ್ದು, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ರಾಧಿಕಾ ಪಂಡಿತ್, ಶುಭಾ ಪೂಂಜಾ, ಮಾನಸಿ, ಸಂಗೀತಾ ಶೆಟ್ಟಿ, ಜಡಿ ಆಕಾಶ್, ಮನೋಜ್, ಸ್ಕಂದ, ರಾಜೇಶ್ ನಟರಂಗ, ಶರಣ್, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಜೈ ಜಗದೀಶ್, ತುಳಸಿ, ವಿಜಯ್ ಕಾಶಿ, ಬಣ್ಣ ಹಚ್ಚಿದ್ದಾರೆ. ಮನೋಮೂರ್ತಿ ಸಂಗೀತ ಸಂಯೋಜನೆ ನೀಡಿದ್ದು, ಸುರೇಶ್ ಸಂಕಲನವಿದೆ.