ಪಾಟ್ನಾ: ವಾಮಾಚಾರದ ಆರೋಪದ ಮೇಲೆ ವ್ಯಕ್ತಿಯನ್ನು ಹತ್ಯೆ ಮಾಡಿದ್ದ ಇಬ್ಬರು ಮಹಿಳೆಯರು ಸೇರಿ 16 ಮಂದಿಗೆ ಬಿಹಾರದ ಔರಂಗಾಬಾದ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಔರಂಗಾಬಾದ್ ನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಧನಂಜಯ ಮಿಶ್ರಾ ಅವರು ಪ್ರಕರಣದ ವಿಚಾರಣೆ ಆಲಿಸಿದ್ದು, ಎಲ್ಲಾ 16 ಅಪರಾಧಿಗಳಿಗೆ ತಲಾ 25 ಸಾವಿರ ರೂಪಾಯಿ ದಂಡ ಮತ್ತು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
2020ರ ಆಗಸ್ಟ್ 13ರಂದು ಇಬ್ರಾಹಿಂಪುರದಲ್ಲಿ ವಾಮಾಚಾರ ನಡೆಸಿದ ಶಂಕೆ ಮೇರೆಗೆ ಜಗದೀಶ್ ರಾಮ್(65) ಎಂಬುವರನ್ನು ಹತ್ಯೆ ಮಾಡಲಾಗಿತ್ತು. ಮೃತ ಜಗದೀಶ್ ಪತ್ನಿ ಈ ಬಗ್ಗೆ ದೂರು ದಾಖಲಿಸಿದ್ದರು. 16 ಮಂದಿ ವಿರುದ್ಧ ಆರೋಪ ಸಾಬೀತಾಗಿದ್ದು, ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.