ಬೆಳಗಾವಿ: ಜ್ಞಾನದೇಗುಲದಲ್ಲಿ ಧರ್ಮ ಸಂಘರ್ಷದ ಕಿಡಿ ಹೊತ್ತಿಸಿದ್ದ ಹಿಜಾಬ್ ವಿವಾದಕ್ಕೆ ಅದೆಷ್ಟೋ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬಹಿಷ್ಕರಿಸಿದ್ದರೆ ಮತ್ತೆ ಹಲವು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ವಿವಾದತ್ತ ಚಿತ್ತ ನೆಟ್ಟು ಅನೇಕ ಮಕ್ಕಳು ತಮ್ಮ ವಿದ್ಯಾಭ್ಯಾಸ, ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದ ಶಾಲಾ-ಕಾಲೇಜಿನಲ್ಲಿ ಆರಂಭವಾದ ಹಿಜಾಬ್, ಕೇಸರಿ ಶಾಲು ಸಂಘರ್ಷದ ಮಧ್ಯೆಯೂ ಇಲ್ಲೋರ್ವ ಮುಸ್ಲಿಂ ವಿದ್ಯಾರ್ಥಿನಿ ಬರೋಬ್ಬರಿ 16 ಚಿನ್ನದ ಪದಕ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ.
ರಾಯಚೂರು ಮೂಲದ 22 ವರ್ಷದ ಬುಶ್ರಾ ಮತೀನ್ ಎಂಬ ವಿದ್ಯಾರ್ಥಿನಿ ಸಿವಿಲ್ ಎಂಜಿನಿಯರಿಂಗ್ ಪದವಿ ವಿಭಾಗದಲ್ಲಿ ಬರೋಬ್ಬರಿ 16 ಚಿನ್ನದ ಪದಕ ಪಡೆದುಕೊಂಡಿದ್ದಾರೆ.
2024ರ ವೇಳೆಗೆ ಕೃಷಿಯಲ್ಲಿ ಶೂನ್ಯ ಡೀಸೆಲ್ ಬಳಕೆ: ಕೇಂದ್ರ ಸರ್ಕಾರದ ಮಹತ್ವದ ಗುರಿ
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿ ಬುಶ್ರಾಳಿಗೆ 16 ಚಿನ್ನದ ಪದಕ ಪ್ರದಾನ ಮಾಡಲಾಗಿದೆ. ಈ ಮೂಲಕ ವಿಶ್ವವಿದ್ಯಾಲಯದ ದಾಖಲೆಯನ್ನು ಮುರಿದು ಹೊಸ ಇತಿಹಾಸವನ್ನು ಬುಶ್ರಾ ಸೃಷ್ಟಿಸಿದ್ದಾರೆ.
ಬುಶ್ರಾ ಮತೀನ್ ರಿಗೆ ಹಲವು ಕಂಪನಿಗಳು ಕ್ಯಾಂಪಸ್ ಸೆಲೆಕ್ಷನ್ ಗೆ ಆಹ್ವಾನ ನೀಡಿವೆ. ಆದರೆ ಬುಶ್ರಾ ತಾನು ಯು.ಪಿ.ಎಸ್.ಸಿ. ಪರೀಕ್ಷೆ ಬರೆಯುವ ಇಚ್ಛೆ ಹೊಂದಿದ್ದು, ಐಎಎಸ್ ಅಧಿಕಾರಿಯಾಗಿ ದೇಶ ಸೇವೆ ಮಾಡಬೇಕು ಎಂಬ ಮಹದಾಸೆ ಹೊಂದಿರುವುದಾಗಿ ತಿಳಿಸಿದ್ದಾರೆ. ಕಳೆದ ನವೆಂಬರ್ ನಿಂದಲೂ ಐಎಎಸ್ ಗಾಗಿ ಸಿದ್ಧತೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಬುಶ್ರಾ ಮತೀನ್ ಸಾಧನೆ ಎಲ್ಲಾ ಹೆಣ್ಣುಮಕ್ಕಳಿಗೂ ಮಾದರಿ. ವಿದ್ಯಾರ್ಥಿನಿಯರು ವಿವಾದಗಳತ್ತ ಗಮನಕೊಟ್ಟು ಶಿಕ್ಷಣ, ಭವಿಷ್ಯವನ್ನು ಹಾಳುಮಾಡಿಕೊಳ್ಳುವ ಮೊದಲು ಬುಶ್ರಾ ಸಾಧನೆಯನ್ನು ಒಮ್ಮೆ ತಿಳಿಯಲೇಬೇಕು.