ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ದೇನಾ ಹೆಸರಿನ ಮಹಿಳೆ 16 ಗಂಟೆಗಳ ಕಾಲ ನೀರಿನಲ್ಲಿ ಸಮಯ ಕಳೆದಿದ್ದಾಳೆ. ನಂತ್ರ ಗಂಭೀರ ಸಮಸ್ಯೆಗೆ ತುತ್ತಾಗಿದ್ದಾಳೆ. ಇದ್ರ ವಿಡಿಯೋ ಹಾಕಿರುವ ಮಹಿಳೆ, ಸಮಸ್ಯೆಗೆ ಪರಿಹಾರ ಕೇಳಿದ್ದಾಳೆ.
ಬ್ರಿಟನ್ ನಲ್ಲಿ ಘಟನೆ ನಡೆದಿದೆ. 16 ಗಂಟೆಗಳ ಕಾಲ ನೀರಿನಲ್ಲಿದ್ದ ದೇನಾ ನಂತ್ರ ವಿಡಿಯೋವನ್ನು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾಳೆ. ಅದ್ರಲ್ಲಿ ಈ ಸಮಸ್ಯೆಗೆ ಪರಿಹಾರವೇನು ಎಂದು ಕೇಳಿದ್ದಾಳೆ. ದೇನಾ ಪಾದದ ಬಣ್ಣ ಬದಲಾಗಿದ್ದು, ಸುಕ್ಕು ಗಟ್ಟಿದಂತಾಗಿದೆ. ಕೆಲ ಕಾರಣದಿಂದಾಗಿ ನೀರಿನಲ್ಲಿ ಸಮಯ ಕಳೆಯಬೇಕಾಯ್ತು. ಈಗ ಭಯವಾಗ್ತಿದೆ. ಇದಕ್ಕೆ ಪರಿಹಾರವಿದ್ದರೆ ತಿಳಿಸಿ ಎಂದು ಕೇಳಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ದೇನಾ ಸಮಸ್ಯೆಗೆ ಅನೇಕರು ಪರಿಹಾರ ಹೇಳಿದ್ದಾರೆ. ಹಾಗೆ ಇಷ್ಟೊಂದು ಸಮಯ ನೀರಿನಲ್ಲಿ ಕಳೆಯುವ ಅವಶ್ಯಕತೆ ಏನಿತ್ತು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇದು Trench Foot ಸಮಸ್ಯೆ. ದೀರ್ಘ ಕಾಲ ನೀರಿನಲ್ಲಿ ದೇಹವಿದ್ದರೆ ಈ ಸಮಸ್ಯೆ ಕಾಡುತ್ತದೆ. ಇದು ಗಂಭೀರ ಸಮಸ್ಯೆಗೆ ಕಾರಣವಾಗಬಹುದು ಎಂದು ಕೆಲವರು ಹೇಳಿದ್ದಾರೆ.