alex Certify 16 ಅಡಿ ಉದ್ದದ ಮೀನನ್ನ ಎತ್ತಲು ಬೇಕಾಯ್ತು ಕ್ರೇನ್; ದೈತ್ಯಾಕಾರ ನೋಡಿ ಬೆಚ್ಚಿಬಿದ್ದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

16 ಅಡಿ ಉದ್ದದ ಮೀನನ್ನ ಎತ್ತಲು ಬೇಕಾಯ್ತು ಕ್ರೇನ್; ದೈತ್ಯಾಕಾರ ನೋಡಿ ಬೆಚ್ಚಿಬಿದ್ದ ಜನ

ಸಾಗರ ನಮ್ಮ ಅಂಕೆಶಂಕೆಗೂ ಮೀರಿದ್ದ ರಹಸ್ಯಮಯ ಜಗತ್ತು. ಇದರಲ್ಲಿ ಅದೆಷ್ಟೋ ಜೀವರಾಶಿಗಳಿವೆ. ಕೆಲವೊಮ್ಮೆ ನಾವು ನೋಡಿದ್ರೆ, ಇನ್ನೂ ಕೆಲವು ನಿಗೂಢವಾಗಿಯೇ ಉಳಿದಿದೆ. ಹಾಗೆ ಉಳಿದುಕೊಂಡಿದ್ದ ಲಕ್ಷಾಂತರ ಜೀವರಾಶಿಗಳಲ್ಲಿ ಜೀವಿಯೊಂದು ಈಗ ಹೊರಜಗತ್ತಿನ ಕಣ್ಣಿಗೆ ಬಿದ್ದಿದೆ. ಆ ಜೀವಿಗೆ ಕೆಲವರು ಶಾಪದ ಮೀನು ಅಂತಾನೂ ಹೆಸರಿಟ್ಟಿದ್ದಾರೆ. ಈಗ ಆ ಮೀನಿನ ವಿಡಿಯೋ ವೈರಲ್ ಆಗ್ತಿದೆ.

ಚಿಲಿಯಲ್ಲಿ ಸೆರೆಯಾದ ದೃಶ್ಯ ಇದು. ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ತಂಡಕ್ಕೆ ಅಚ್ಚರಿಯೊಂದು ಕಾದಿತ್ತು. ಅದೇನೆಂದರೆ ಬರೋಬ್ಬರಿ 16 ಅಡಿ ಉದ್ದದ ಮೀನು ಬಲೆಗೆ ಬಿದ್ದಿತ್ತು. ಈ ಮೀನು ಅದೆಷ್ಟು ಉದ್ದ ಮತ್ತು ತೂಕ ಇತ್ತು ಅಂದ್ರೆ, ಅದನ್ನ ಕ್ರೇನ್ ಮೂಲಕ ಮೇಲಕ್ಕೆತ್ತಿ ನೋಡಬೇಕಾಯ್ತು.

ಈ ಮೀನು ನೋಡಿದಾಕ್ಷಣ ಭಯ ಆಗುವ ರೀತಿಯಲ್ಲಿತ್ತು. ಇಷ್ಟು ವಿಶಾಲಕಾಯದ ಮೀನು ಇರಬಹುದು ಅಂತ ಯಾರೂ ಊಹಿಸಿಯೇ ಇರಲಿಲ್ಲ. ಇಂತಹದ್ದೊಂದು ವಿಚಿತ್ರ ಮೀನನ್ನ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಈ ಮೀನನ್ನ ದಡಕ್ಕೆ ತರುವುದು ಕಾರ್ಮಿಕರಿಗೆ ದೊಡ್ಡ ಕೆಲಸವಾಗಿತ್ತು. ಈ ಮೀನಿಗೆ ಹೆಸರು ’ಓವರ್‌ಫಿಶ್‌ ’ ಅಂತ ಹೆಸರಿಡಲಾಗಿದೆ.

ಈ ವಿಡಿಯೋವನ್ನ ಮೊದಲು ಟಿಕ್‌ಟಾಕ್‌ನಲ್ಲಿ ಅಪ್ಲೋಡ್ ಮಡಲಾಗಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಇದುವರೆಗೂ ಸಾಕಷ್ಟು ಮಿಲಿಯನ್ ವೀಕ್ಷಣೆಯನ್ನೂ ಗಳಿಸಿದೆ. ಎಲ್ಲರೂ ಬಲು ಕುತೂಹಲದಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ. ಜತೆಗೆ ಈ ಬಗ್ಗೆ ಜನರಲ್ಲಿ ಚರ್ಚೆ ಕೂಡಾ ಶುರುವಾಗಿದೆ.

ಕೆಲವರು ಈ ಮೀನು ದಡಕ್ಕೆ ಬಂದಿರುವುದು ಮುಂದಿನ ಅನಾಹುತದ ಸೂಚನೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸುನಾಮಿ ಮತ್ತು ನೀರಿನೊಳಗಿನ ಭೂಕಂಪನದ ಕೆಟ್ಟ ಶಕುನ ಎಂದು ಸಾಕಷ್ಟು ಮಂದಿ ಭಯದಿಂದಲೇ ಕಾಮೆಂಟ್ ಹಾಕಿದ್ದಾರೆ. ಈ ರೀತಿಯ ಇನ್ನೂ ಅದೆಷ್ಟೊ ಜೀವರಾಶಿಗಳು ನೀರಿನಾಳದೊಳಗಿವೆ. ಅವೆಲ್ಲವೂ ಒಂದೊಂದಾಗಿ ಆಗಾಗ ಮೇಲಕ್ಕೆ ಬಂದಾಗ ಮೀನುಗಾರರ ಬಲೆಯಲ್ಲಿ ಸಿಕ್ಕಾಕಿಕೊಂಡು ಬಿಟ್ಟಿರುತ್ತೆ. ಈ ಮೀನು ಕೂಡಾ ಅದೇ ರೀತಿ ಸಿಕ್ಕಾಕಿಕೊಂಡು ಬಿದ್ದಿದೆ ಅಂತ ಹೇಳಲಾಗುತ್ತಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...