ಇಂಗ್ಲೆಂಡ್ನಲ್ಲಿ 32ರ ಹರೆಯದ ಶಿಕ್ಷಕನೊಬ್ಬ 16 ವರ್ಷದ ವಿದ್ಯಾರ್ಥಿನಿಯೊಂದಿಗೆ ದೈಹಿಕ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಬಯಲಾಗುತ್ತಿದ್ದಂತೆ ಯಾವುದೇ ಶಾಲೆಯಲ್ಲಿ ಬೋಧನೆ ಮಾಡದಂತೆ ಶಿಕ್ಷಕನಿಗೆ ನಿರ್ಬಂಧ ವಿಧಿಸಲಾಗಿದೆ. ಶಿಕ್ಷಕ ಆಡಮ್ ಜೇಮ್ಸ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಆ್ಯಡಂ ಬೇರೆ ಯಾವುದಾದರೂ ಶಾಲೆಗಳಲ್ಲಿ ಇಂಥದ್ದೇ ನೀಚ ಕೃತ್ಯ ಎಸಗಿದ್ದಾನೆಯೇ ಎಂಬುದನ್ನು ಪತ್ತೆ ಮಾಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ವಿದ್ಯಾರ್ಥಿನಿ ಕೇವಲ 16 ವರ್ಷದವಳಿದ್ದಾಗ ಮೊದಲ ಬಾರಿ ಶಿಕ್ಷಕ ಆಡಂ ಜೇಮ್ಸ್ ಜೊತೆ ಸಂಬಂಧ ಶುರುವಿಟ್ಟುಕೊಂಡಿದ್ದಾಳಂತೆ. ವಿದ್ಯಾರ್ಥಿನಿ ಬಲೆಗೆ ಬಿದ್ದಿದ್ದು ಖಚಿತವಾಗುತ್ತಿದ್ದಂತೆ ಕಾಮುಕ ಶಿಕ್ಷಕ ಆಕೆಯನ್ನು ನಿರಂತರವಾಗಿ ಬಳಸಿಕೊಂಡಿದ್ದಾನೆ.
ಸ್ನ್ಯಾಪ್ಚಾಟ್ ಮತ್ತು ಇಮೇಲ್ ಮೂಲಕ ಶಿಕ್ಷಕ ಆಡಂ, ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶಗಳು ಮತ್ತು ಅವರ ನಗ್ನ ಫೋಟೋಗಳನ್ನು ಕಳುಹಿಸಿರುವುದು ಬೆಳಕಿಗೆ ಬಂದಿದೆ. ಯಾರೂ ಗುರುತಿಸದಂತಹ ಜಾಗಕ್ಕೆ ಕದ್ದುಮುಚ್ಚಿ ಪಾರ್ಕ್ನಲ್ಲಿ ಸುತ್ತಾಡಲು ಮತ್ತು ಊಟಕ್ಕೆ ವಿದ್ಯಾರ್ಥಿನಿಯನ್ನು ಈತ ಕರೆದುಕೊಂಡು ಹೋಗುತ್ತಿದ್ದ. ಒಮ್ಮೆ ಯಾರೂ ಇಲ್ಲದ ಸಮಯ ನೋಡಿ ವಿದ್ಯಾರ್ಥಿನಿಯನ್ನು ಶಿಕ್ಷಕ ಮನೆಗೇ ಕರೆದೊಯ್ದಿದ್ದ.
ಆದರೆ ಕೆಲಹೊತ್ತಿನಲ್ಲೇ ಆತನ ಸಹೋದರ ಬಂದುಬಿಟ್ಟಿದ್ದಾನೆ. ಗಾಬರಿಬಿದ್ದ ಆಡಂ ವಿದ್ಯಾರ್ಥಿಯನ್ನು ಕಬೋರ್ಡ್ನಲ್ಲಿ ಬಚ್ಚಿಟ್ಟು ಬೀಗ ಹಾಕಿದ್ದಾನೆ. ವಿದ್ಯಾರ್ಥಿನಿಯು ಆರ್ಮಿಸ್ಟನ್ ಅಕಾಡೆಮಿಯನ್ನು ತೊರೆಯುವ ಮೊದಲು ಆಡಮ್ ಜೇಮ್ಸ್ ಜೊತೆ ದೈಹಿಕ ಸಂಬಂಧವನ್ನು ಹೊಂದಿರಲಿಲ್ಲ ಅಂತಾ ಹೇಳಲಾಗ್ತಿದೆ. ಆದರೆ ಆಡಂ ಆಕೆ ಅದೇ ಶಾಲೆಯಲ್ಲಿ ಓದುತ್ತಿದ್ದಾಗ ನಿರಂತರವಾಗಿ ಆ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಶಾಲೆಯ ಉಳಿದ ವಿದ್ಯಾರ್ಥಿನಿಯರಿಗಿಂತ ಆಕೆಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದ.