alex Certify 16 ವರ್ಷದ ಅಪ್ರಾಪ್ತೆ ಮದುವೆಯಾಗಿದ್ದ 52 ರ ವ್ಯಕ್ತಿಗೆ ‘ಸಂಕಷ್ಟ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

16 ವರ್ಷದ ಅಪ್ರಾಪ್ತೆ ಮದುವೆಯಾಗಿದ್ದ 52 ರ ವ್ಯಕ್ತಿಗೆ ‘ಸಂಕಷ್ಟ’

16 ವರ್ಷದ ಅಪ್ರಾಪ್ತೆಯನ್ನು ಮದುವೆಯಾಗಿದ್ದ 52 ವರ್ಷದ ವ್ಯಕ್ತಿಗೆ ಈಗ ಸಂಕಷ್ಟ ಶುರುವಾಗಿದೆ. ಮೂರು ತಿಂಗಳ ಹಿಂದೆ ಈತ ಮದುವೆಯಾಗಿದ್ದ ಎನ್ನಲಾಗಿದ್ದು, ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಬಂಧನದ ಭೀತಿಯಿಂದ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದ್ದು, 52 ವರ್ಷದ ಅನಿಲ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ. ಈತ ಜುಲೈ 19 ರಂದು ಕಾರವಾರದ ದೇವಾಲಯ ಒಂದರಲ್ಲಿ ಅಪ್ರಾಪ್ತೆ ಜೊತೆ ಅದ್ದೂರಿಯಾಗಿ ವಿವಾಹವಾಗಿದ್ದ.

ಕೆಲ ದಿನಗಳ ಹಿಂದೆ ಈ ವಿಚಾರ ಅಂಗನವಾಡಿ ಕಾರ್ಯಕರ್ತರಿಗೆ ತಿಳಿದುಬಂದಿದೆ. ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ವಧುವಿನ ವಿವರ ಪರಿಶೀಲಿಸಿದಾಗ ಆಕೆಗೆ 16 ವರ್ಷ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ವರ ಅನಿಲ್ ಸೇರಿದಂತೆ ಮದುವೆಗೆ ಹಾಜರಾಗಿದ್ದ 60 ಮಂದಿಗೆ ನೋಟಿಸ್ ನೀಡಲಾಗಿದ್ದು, ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಅನಿಲ್ ವಿರುದ್ಧ ಅತ್ಯಾಚಾರ ಪ್ರಕರಣ ಸಹ ದಾಖಲಾಗುವ ಸಾಧ್ಯತೆ ಇದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...