ಮೇರಿಲ್ಯಾಂಡ್: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣಪ್ರತಿಷ್ಠಾಪನೆಗೆ ವಿಶ್ವದಾದ್ಯಂತ ಹಿಂದೂಗಳು ಭರ್ಜರಿ ಸಿದ್ಧತೆ ನಡೆಸಿದ್ದು, ಅಮೆರಿಕದ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮೇರಿಲ್ಯಾಂಡ್ ರಾಜ್ಯದಲ್ಲಿ ಎಪಿಕ್ ಟೆಸ್ಲಾ ಸಂಗೀತ ಬೆಳಕಿನ ಪ್ರದರ್ಶನವನ್ನು ಆಯೋಜಿಸಿದೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ‘ಪ್ರಾಣ ಪ್ರತಿಷ್ಠಾಪನೆ’ ಕ್ಕೆ ಮುಂಚಿತವಾಗಿ ಅಮೆರಿಕದ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮೇರಿಲ್ಯಾಂಡ್ನಲ್ಲಿ ಎಪಿಕ್ ಟೆಸ್ಲಾ ಮ್ಯೂಸಿಕಲ್ ಲೈಟ್ ಶೋ ಆಯೋಜಿಸಿತ್ತು.
ವೀಡಿಯೊಗಳಲ್ಲಿ ಹಿಂದೂ ಸಮುದಾಯದ ಜನರು ಭಗವಾನ್ ರಾಮನ ಚಿತ್ರಗಳನ್ನು ಕೆತ್ತಲಾದ ಧ್ವಜಗಳನ್ನು ಹಿಡಿದು ‘ಜೈ ಶ್ರೀ ರಾಮ್’ ಮತ್ತು ‘ರಾಮ್ ಲಕ್ಷ್ಮಣ್ ಜಾನಕಿ, ಜೈ ಶ್ರೀ ಹನುಮಾನ್ ಕಿ’ ಘೋಷಣೆಗಳನ್ನು ಕೂಗುತ್ತಿರುವುದನ್ನು ತೋರಿಸಿದೆ..