ಪ್ರತಿ ವರ್ಷ ವಾಯುಮಾಲಿನ್ಯ ಮಿತಿಮೀರುವ ಪರಿಣಾಮ ’ವಿಷಾನಿಲ ಕೊಠಡಿ’ಯಂತಾಗುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ದೆಹಲಿ ಸಾರಿಗೆ ಇಲಾಖೆ (ಡಿಟಿಡಿ) ಹೊಸ ಯೋಜನೆ ಶುರುಮಾಡಿದೆ.
ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಲ್ಲಿ 10 ವರ್ಷಕ್ಕೂ ಹಳೆಯದಾದ ಡೀಸೆಲ್ ಚಾಲಿತ ವಾಹನಗಳು, 15 ವರ್ಷಕ್ಕೂ ಹಳೆಯ ಪೆಟ್ರೋಲ್ ಚಾಲಿತ ವಾಹನಗಳನ್ನು ಇನ್ಮುಂದೆ ರಸ್ತೆಗೆ ಇಳಿಸುವಂತಿಲ್ಲ. ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿದೆ. ಇದು ಕೇಂದ್ರ ಸರ್ಕಾರದ ಸಾರಿಗೆ ಸ್ಕ್ರ್ಯಾಪಿಂಗ್ ಪಾಲಿಸಿ ಅನ್ವಯ ಜಾರಿಗೆ ಬಂದಿದೆ.
ಬೆಟ್ಟದ ತುದಿಯಲ್ಲಿ ದುಡುಕಿದ ಪ್ರೇಮಿಗಳು, ಸೊಂಟಕ್ಕೆ ವೇಲ್ ಕಟ್ಟಿಕೊಂಡು ಹಾರಿ ಆತ್ಮಹತ್ಯೆ
ಈಗಾಗಲೇ ಹೊಸ ಪಾಲಿಸಿಯನ್ನು ಎಲ್ಲ ರಾಜ್ಯಗಳಲ್ಲೂ ಜಾರಿಗೆ ಕೇಂದ್ರ ಮುಂದಾಗಿದೆ. ಸ್ಕ್ರ್ಯಾಪ್ ನೀತಿ ಆಯ್ಕೆಗೆ ವಾಹನಗಳ ಮಾಲೀಕರಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ವಾಯುಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಸಲುವಾಗಿ ಪ್ರಮುಖವಾಗಿ ವಾಣಿಜ್ಯ ಬಳಕೆಯ ಡೀಸೆಲ್ ಚಾಲಿತ ಹಳೆಯ ವಾಹನಗಳನ್ನು ರಸ್ತೆಗೆ ಇಳಿಯದಂತೆ ತಡೆಯುವುದು ಈ ನೀತಿಯ ಉದ್ದೇಶವಾಗಿದೆ.
ಒಂದು ವೇಳೆ ಹಳೆಯ ವಾಹನಗಳನ್ನು ಮಾಲೀಕರು ರಸ್ತೆಗೆ ಇಳಿಸಲೇಬೇಕಾದಲ್ಲಿ ಸಾರಿಗೆ ಇಲಾಖೆಯ ಆಟೊಮೇಟೆಡ್ ಪರೀಕ್ಷೆಯಲ್ಲಿ ವಾಹನ ’ಪಾಸ್’ ಆಗಬೇಕು. ಜತೆಗೆ ಹೊಸ ವಾಹನ ಖರೀದಿ ಬಳಿಕ 15 ವರ್ಷ ಕಳೆದ ಮೇಲೆ ಮಾಡಲಾಗುವ ’ಫಿಟ್‌ನೆಸ್ ಪರೀಕ್ಷೆ’, ‘ಎಮಿಷನ್ ಟೆಸ್ಟ್’ ಗಳಲ್ಲಿ ಕೂಡ ವಾಹನವು ಪಾಸ್ ಆಗಲೇಬೇಕಿದೆ. ಇದನ್ನು ಮಾಡಿಸದೆಯೇ ಅಸಡ್ಡೆ ಮಾಡಿ ಹಳೆಯ ವಾಹನವು ರಸ್ತೆಗೆ ಇಳಿದಲ್ಲಿ, 1988ರ ಮೋಟಾರ್ ವಾಹನಗಳ ಕಾಯಿದೆ ಅಡಿಯಲ್ಲಿ ಭಾರಿ ದಂಡ ತೆರಬೇಕಾದೀತು.
ಸ್ಕ್ರ್ಯಾಪ್ ಮಾಡಲಾದ ವಾಹನದ ಸರ್ಟಿಫಿಕೇಟ್ ಪಡೆದು ಹೊಸ ವಾಹನ ಖರೀದಿಗೆ ಮುಂದಾದಲ್ಲಿ ಕೆಲವು ಕಾರು ತಯಾರಿಕೆ ಕಂಪನಿಗಳು ಭರ್ಜರಿ ಕೊಡುಗೆಗಳನ್ನು ಕೂಡ ನೀಡುತ್ತಿವೆ. ಹಳೆಯ ವಾಹನಗಳನ್ನು ಮಹೀಂದ್ರಾ ಕಂಪನಿಯು 8 ರಿಂದ 80 ಸಾವಿರ ರೂ.ಗಳವರೆಗೆ ಖರೀದಿಸುತ್ತಿದೆ ಕೂಡ.