ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ನಾಗರಹಳ್ಳಿ ಸಮೀಪ ಕಲ್ಲು ಕ್ವಾರಿಯಲ್ಲಿ ನಡೆದ ಸ್ಫೋಟದ ತೀವ್ರತೆಗೆ ಗ್ರಾಮದಲ್ಲಿ 15 ಎಲ್ಇಡಿ ಟಿವಿಗಳು ಬ್ಲಾಸ್ಟ್ ಆಗಿವೆ.
ನಾಗರಹಳ್ಳಿ ಹಾಗೂ ತಿಮ್ಮನಹಳ್ಳಿ ಗ್ರಾಮಗಳಲ್ಲಿ 15 ಟಿವಿಗಳು ಬ್ಲಾಸ್ಟ್ ಆಗಿವೆ. ಅಲ್ಲದೇ ಸ್ಪೋಟದ ವೇಳೆ ಮನೆಯಲ್ಲಿದ್ದ ಪಾತ್ರೆಗಳು ಚೆಲ್ಲಾಪಿಪಿಲ್ಲಿಯಾಗಿವೆ. ಕೆಲವು ಮನೆಯ ಛಾವಣಿಯ ಶೀಟ್ ಗಳು ಬಿರುಕು ಬಿಟ್ಟಿದ್ದು, ಕೆಲವು ಮನೆ ಕಿಟಕಿ ಗಾಜುಗಳು ಒಡೆದು ಹೋಗಿವೆ. ಸ್ಪೋಟದ ತೀವ್ರತೆಯಿಂದ ಆರು ಸೆಕೆಂಡು ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.