ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಚಂದ್ರಶೇಖರ್ ಆಜಾದ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಮಂಗಳವಾರ 15 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದೆ. ಮೇಕೆಯನ್ನು ನುಂಗಿ ವಿಶ್ರಾಂತಿ ಪಡೆಯುತ್ತಿದ್ದಾಗ ಸ್ಥಳೀಯರ ಕಣ್ಣಿಗೆ ಇದು ಬಿದ್ದಿದೆ.
ವಿಶ್ವವಿದ್ಯಾಲಯದ ಡೈರಿ ವಿಭಾಗದ ಬಳಿ ಸ್ಥಳೀಯರ ಕಣ್ಣಿಗೆ ಇದು ಮೊದಲಿಗೆ ಬಿದ್ದಿದ್ದು, ಅದನ್ನು ಎಚ್ಚರಿಸಲು ಗಲಾಟೆ ಆರಂಭಿಸಿದ್ದಾರೆ. ಬಳಿಕ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿದ್ದು, ಅವರು ಬಂದು ಹೆಬ್ಬಾವನ್ನು ತೆಗೆದುಕೊಂಡು ಹೋಗಿದ್ದಾರೆ.
ಕೃಷಿ ವಿವಿ ಆವರಣದಲ್ಲಿ ಹೆಬ್ಬಾವು ಬಂದಿದೆ ಎಂಬುದನ್ನು ತಿಳಿದ ಜನ ಭಾರಿ ಸಂಖ್ಯೆಯಲ್ಲಿ ಇದನ್ನು ನೋಡಲು ಆಗಮಿಸಿದ್ದು, ನೂಕು ನುಗ್ಗಲು ಉಂಟಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಇದನ್ನು ತೆಗೆದುಕೊಂಡು ಹೋದ ಬಳಿಕ ಜನ ಅಲ್ಲಿಂದ ಚದುರಿದ್ದಾರೆ.