ನವದೆಹಲಿ: ಕೇರಳದಲ್ಲಿ ಮನೆ ಮೇಲೆ ದಿಬ್ಬಣದ ಬಸ್ ಉರುಳಿ 5 ಮಂದಿ ಸಾವನ್ನಪ್ಪಿದ ಘಟನೆ ಬಳಿಕ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತೊಂದು ದುರಂತ ಸಂಭವಿಸಿರುವ ಕುರಿತು ವರದಿಯಾಗಿದೆ.
ದೆಹಲಿ ಸಮೀಪದ ಗಾಜಿಯಾಬಾದ್ ನಲ್ಲಿ ಭಾರೀ ದುರಂತ ಸಂಭವಿಸಿದೆ. ಸ್ಮಶಾನದ ಕಾಂಪೌಂಡ್ ಗೋಡೆ, ಇದಕ್ಕೆ ತಾಗಿಕೊಂಡ ಛಾವಣಿ ಕುಸಿದು 15 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಅನೇಕರು ಅಲ್ಲಿ ಸಿಕ್ಕಿಬಿದ್ದಿರುವ ವರದಿಯಾಗಿದೆ. ಘಟನೆ ನಂತ್ರ ಸ್ಥಳಕ್ಕಾಗಮಿಸಿರುವ ರಕ್ಷಣಾ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಯುತ್ತಿದೆ.
ಗಾಜಿಯಾಬಾದ್ ನ ಮುರಾದ್ ನಗರದಲ್ಲಿ ಘಟನೆ ನಡೆದಿದೆ. ದೆಹಲಿ ಸೇರಿದಂತೆ ಗಾಜಿಯಾಬಾದ್ ನಲ್ಲಿ ಬೆಳಿಗ್ಗೆಯಿಂದ ಮಳೆ ಬರ್ತಿದೆ. ವ್ಯಕ್ತಿಯೊಬ್ಬನ ಅಂತಿಮ ಸಂಸ್ಕಾರಕ್ಕೆ ಸಂಬಂಧಿಕರು ಸ್ಮಶಾನಕ್ಕೆ ಹೋಗಿದ್ದರು ಎನ್ನಲಾಗಿದೆ.
ಮಳೆ ಕಾರಣ ಸ್ಮಶಾನದ ಛಾವಣಿ ಕೆಳಗೆ ನಿಂತಿದ್ದಾರೆ. ಆದ್ರೆ ಅದೇ ಛಾವಣಿ ಯಮನಾಗಿ ಬಂದಿದೆ. ಛಾವಣಿ ಮುರಿದು ಬಿದ್ದಿದ್ದು, ಜನರು ಅದ್ರಡಿ ಸಿಲುಕಿದ್ದಾರೆ. ಲ್ಯಾಂಟರ್ ದೊಡ್ಡದಾಗಿದ್ದ ಕಾರಣ ಅದನ್ನು ತೆಗೆಯುವುದು ಕಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕ್ರೇನ್ ಮೂಲಕ ಅದನ್ನು ತೆಗೆಯಲಾಗ್ತಿದೆ. ಸುಮಾರು 20 ಕ್ಕೂ ಹೆಚ್ಚು ಮಂದಿ ಅಲ್ಲಿದ್ದರು ಎನ್ನಲಾಗಿದೆ. 15 ಮಂದಿ ಸಾವನ್ನಪ್ಪಿದ್ದು, ಉಳಿದವರ ರಕ್ಷಣೆ ನಡೆಯುತ್ತಿದೆ.