
ಮಾಸ್ಕೋ: ಮಧ್ಯ ರಷ್ಯಾದಲ್ಲಿ ಸ್ಕೈಡೈವರ್‌ಗಳನ್ನು ಹೊತ್ತ ವಿಮಾನವೊಂದು ಭಾನುವಾರ ಪತನಗೊಂಡಿದ್ದು, ವಿಮಾನದಲ್ಲಿದ್ದ 22 ಜನರ ಪೈಕಿ 15 ಮಂದಿ ಸಾವನ್ನಪ್ಪಿದ್ದಾರೆ.
ಎಲ್ -410, ಜೆಕ್ ನಿರ್ಮಿತ ಅವಳಿ ಎಂಜಿನ್ ಟರ್ಬೊಪ್ರೊಪ್, ಮಾಸ್ಕೋದ ಪೂರ್ವಕ್ಕೆ ಸುಮಾರು 960 ಕಿಲೋಮೀಟರ್ (600 ಮೈಲಿ) ದೂರದಲ್ಲಿರುವ ಮೆನ್ಜೆಲಿನ್ಸ್ಕ್ ಪಟ್ಟಣದ ಬಳಿ ಅಪಘಾತಕ್ಕೀಡಾಯಿತು.
ಅವಶೇಷಗಳಿಂದ 7 ಜನರನ್ನು ಜೀವಂತವಾಗಿ ಹೊರತೆಗೆಯಲಾಗಿದ್ದು, ಅವರಲ್ಲಿ ಕನಿಷ್ಠ ಒಬ್ಬರಿಗೆ ತೀವ್ರ ಗಾಯಗಳಾಗಿವೆ ಎಂದು ತುರ್ತು ಸಚಿವಾಲಯ ಹೇಳಿದೆ. ಅಪಘಾತದ ಕಾರಣವನ್ನು ತಕ್ಷಣವೇ ನಿರ್ಧರಿಸಲಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.