alex Certify 15 ದಿನಗಳಲ್ಲಿ 13ನೇ ಬಾರಿಗೆ ಪೆಟ್ರೋಲ್​, ಡೀಸೆಲ್​ ದರಗಳಲ್ಲಿ ಏರಿಕೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

15 ದಿನಗಳಲ್ಲಿ 13ನೇ ಬಾರಿಗೆ ಪೆಟ್ರೋಲ್​, ಡೀಸೆಲ್​ ದರಗಳಲ್ಲಿ ಏರಿಕೆ..!

ಪೆಟ್ರೋಲ್​ ಹಾಗೂ ಡೀಸೆಲ್​ಗಳ ಬೆಲೆಯಲ್ಲಿ ಇಂದು ಕೂಡ ಪ್ರತಿ ಲೀಟರ್​ಗೆ 80 ಪೈಸೆ ಏರಿಕೆ ಕಂಡಿದೆ. ಈ ಮೂಲಕ ಕಳೆದ 2 ವಾರಗಳಲ್ಲಿ ಪೆಟ್ರೋಲ್​, ಡೀಸೆಲ್​ಗಳ ದರ 9.20 ರೂಪಾಯಿ ಏರಿಕೆ ಕಂಡಂತಾಗಿದೆ.

ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 104.61 ರೂಪಾಯಿ ಆಗಿದೆ. ಅದೇ ರೀತಿ ಡೀಸೆಲ್​ ದರ ಪ್ರತಿ ಲೀಟರ್​​ಗೆ 95.87 ರೂಪಾಯಿ ಆಗಿದೆ.

ಮುಂಬೈನಲ್ಲೂ ಪೆಟ್ರೋಲ್​ ಹಾಗೂ ಡೀಸೆಲ್​ಪ್ರತಿ ಲೀಟರ್​ಗೆ ಕ್ರಮವಾಗಿ 84 ಹಾಗೂ 85 ಪೈಸೆ ಏರಿಕೆ ಕಂಡಿದೆ. ಈ ಏರಿಕೆಯ ಬಳಿಕ ಮುಂಬೈನಲ್ಲಿ ಪ್ರತಿ ಲೀಟರ್​​ ಪೆಟ್ರೋಲ್​ ಬೆಲೆ 119.67 ರೂಪಾಯಿ ಆಗಿದ್ದರೆ ಡೀಸೆಲ್​ ದರ 103.92 ರೂಪಾಯಿ ಆಗಿದೆ.

ದೇಶಾದ್ಯಂತ ಇಂಧನ ದರಗಳು ಹೆಚ್ಚುತ್ತಿವೆ ಮತ್ತು ಸ್ಥಳೀಯ ತೆರಿಗೆಯ ಸಂಭವವನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಈ ದರಗಳು ಬದಲಾಗುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...