ಜಕಾರ್ತಾ: ಇಂಡೋನೇಷ್ಯಾದ ಮಕಾಸ್ಸರ್ ಕ್ಯಾಥೋಲಿಕ್ ಚರ್ಚ್ ಹೊರಗೆ ಭಾನುವಾರ ಇಬ್ಬರು ಆತ್ಮಾಹುತಿ ಬಾಂಬರ್ ಗಳು ತಮ್ಮನ್ನು ತಾವು ಸ್ಪೋಟಿಸಿಕೊಂಡಿದ್ದು, ಘಟನೆಯಲ್ಲಿ 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈಸ್ಟರ್ ಪವಿತ್ರ ವಾರದ ಮೊದಲ ದಿನದಂದು ಇಂತಹ ದುರ್ಘಟನೆಗೆ ಇಂಡೋನೇಷ್ಯಾ ಸಾಕ್ಷಿಯಾಗಿದೆ. ಜಕಾರ್ತಾದಲ್ಲಿ ರಾಷ್ಟ್ರೀಯ ಪೊಲೀಸ್ ವಕ್ತಾರ ಜನರಲ್ ಅರ್ಗೋ ಯುವೊನೊ ಈ ಬಗ್ಗೆ ಮಾಹಿತಿ ನೀಡಿದ್ದು, ಎದೆ, ಕೈಕಾಲು, ದೇಹದ ಭಾಗಗಳಿಗೆ ಗಂಭೀರವಾದ ಗಾಯಗಳಾಗಿದ್ದರಿಂದ ಸ್ಪೋಟದಲ್ಲಿ ಗಾಯಗೊಂಡ ಗಾಯಾಳುಗಳು ನರಳುತ್ತಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾವಿನ ಸಂಖ್ಯೆಯನ್ನು ಖಚಿತಪಡಿಸಲಾಗಿಲ್ಲ. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಇಬ್ಬರೂ ಬಾಂಬರ್ ಗಳು ತಮ್ಮನ್ನು ತಾವು ಸ್ಪೋಟಿಸಿಕೊಂಡಿದ್ದಾರೆ. ಪರಿಶೀಲನೆ ನಂತರ ಸಾವಿನ ಸಂಖ್ಯೆ ತಿಳಿಯಲಿದೆ ಎಂದು ಹೇಳಿದ್ದಾರೆ. ಗಾಯಗೊಂಡವರಲ್ಲಿ ಐವರು ಚರ್ಚ್ ಸಿಬ್ಬಂದಿ ಸೇರಿದ್ದಾರೆ. ಘಟನೆಯ ದಾಳಿಯ ಹೊಣೆಯನ್ನು ಯಾವ ಸಂಘಟನೆಯ ಕೈವಾಡವಿದೆ ಎನ್ನುವುದು ಗೊತ್ತಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಇದರೊಂದಿಗೆ ತನಿಖೆ ಮುಂದುವರೆಸಲಾಗಿದೆ.