alex Certify 14ರ ಬಾಲಕನಾಗಿದ್ದಾಗಲೇ 55 ವರ್ಷದ ಮಹಿಳೆ ಜೊತೆಗೆ ಸೆಕ್ಸ್‌, ಮತ್ತೆ ಸದ್ದು ಮಾಡಿದೆ ಹಿರಿಯ ನಟನ ವಿವಾದಾತ್ಮಕ ಬದುಕು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

14ರ ಬಾಲಕನಾಗಿದ್ದಾಗಲೇ 55 ವರ್ಷದ ಮಹಿಳೆ ಜೊತೆಗೆ ಸೆಕ್ಸ್‌, ಮತ್ತೆ ಸದ್ದು ಮಾಡಿದೆ ಹಿರಿಯ ನಟನ ವಿವಾದಾತ್ಮಕ ಬದುಕು…!

ಓಂಪುರಿ ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ನಟರಲ್ಲೊಬ್ಬರು. ಅದ್ಭುತ ಅಭಿನಯದ ಮೂಲಕವೇ ಛಾಪು ಮೂಡಿಸಿದ ಕಲಾವಿದ. ಅವರ ಸ್ಥಾನದಲ್ಲಿ ಇನ್ನೊಬ್ಬ ನಟನನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಓಂಪುರಿ 70ರ ದಶಕದಲ್ಲಿ ತಮ್ಮ ಸಿನಿ ಪಯಣ ಪ್ರಾರಂಭಿಸಿದರು. ಅಕ್ಟೋಬರ್‌ 18, 1950 ರಲ್ಲಿ ಇವರು ಅಂಬಾಲದಲ್ಲಿ ಜನಿಸಿದ್ದರು.

ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ಹಾಲಿವುಡ್‌ನಲ್ಲಿಯೂ ಗುರುತಿಸಿಕೊಂಡಿದ್ದು ವಿಶೇಷ. ಪ್ರತಿ ಪಾತ್ರಕ್ಕೂ ಜೀವ ತುಂಬುತ್ತಿದ್ದರು ಓಂಪುರಿ. ಸಿನಿ ಬದುಕಿನ ಯಶಸ್ಸಿನ ಜೊತೆಜೊತೆಗೇ ಸಾಕಷ್ಟು ವಿವಾದಗಳಲ್ಲಿ ಸಿಲುಕಿಕೊಂಡಿದ್ದರು. ನೇರ ಮಾತಿನ ಕಾರಣಕ್ಕೇ ವಿವಾದಕ್ಕೀಡಾಗಿರುವ ನಟ ಇವರು.

14 ವರ್ಷದವರಿದ್ದಾಗ್ಲೇ ಓಂಪುರಿ 55 ವರ್ಷದ ಮನೆಗೆಲಸದವಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು ಅನ್ನೋ ವಿಚಾರ ವಿವಾದ ಸೃಷ್ಟಿಸಿತ್ತು. ಓಂ ಪುರಿ ಅವರ ಮಾಜಿ ಪತ್ನಿ ನಂದಿತಾ ಪುರಿ ಈ ಬಗ್ಗೆ ಅವರ ಜೀವನ ಚರಿತ್ರೆ ಅನ್‌ಲೈಕ್ಲಿ ಹೀರೋ: ದಿ ಸ್ಟೋರಿ ಆಫ್ ಓಂ ಪುರಿ ಪುಸ್ತಕದಲ್ಲಿ ಬರೆದಿದ್ದಾರೆ. ಈ ವಿಚಾರ ಸಾಕಷ್ಟು ಅಚ್ಚರಿ ಹಾಗೂ ಆಘಾತಕ್ಕೆ ಕಾರಣವಾಗಿತ್ತು. ಓಂಪುರಿ ಲಕ್ಷ್ಮಿ ಎಂಬ ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಬಗ್ಗೆ ಪುಸ್ತಕದಲ್ಲಿ ವಿವರಗಳಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಓಂಪುರಿ, ಈ ವಿಚಾರದಲ್ಲಿ ತಪ್ಪು ಯಾರದ್ದು? 14ರ ಬಾಲಕನದ್ದೋ? ಅಥವಾ 55ರ ಮಹಿಳೆಯದ್ದೋ ಎಂದು ಪ್ರಶ್ನಿಸಿದ್ದರು.

ಗೋಮಾಂಸ ಸೇವನೆ ವಿಚಾರದಲ್ಲೂ ಓಂಪುರಿ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಗೋಮಾಂಸ ಸೇವನೆ ಬೆಂಬಲಿಸಿದ್ದ ಓಂಪುರಿ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. 2016 ರಲ್ಲಿ ಬಾರಾಮುಲ್ಲಾದ ರಾಷ್ಟ್ರೀಯ ರೈಫಲ್ಸ್ ಸೇನಾ ಶಿಬಿರದ ಪಕ್ಕದಲ್ಲಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿಯ ಸಂದರ್ಭದಲ್ಲಿ, ಇಡೀ ದೇಶವು ಸೈನಿಕರನ್ನು ಕಳೆದುಕೊಂಡ ದುಃಖದಲ್ಲಿತ್ತು.

ಈ ವೇಳೆ  ಓಂಪುರಿ ಸೇನೆಯ ಬಗ್ಗೆ ಆಕ್ಷೇಪಾರ್ಹ ಪ್ರತಿಕ್ರಿಯೆ ನೀಡಿದ್ದರು. ಹುತಾತ್ಮ ಯೋಧರ ಕುಟುಂಬಗಳಿಗೆ ಸಾಂತ್ವನ ಹೇಳುವ ಬದಲು, “ಸೈನಿಕರನ್ನು ಸೇನೆಗೆ ಸೇರುವಂತೆ ಕೇಳಿದ್ದು ಯಾರು? ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಯಾರು ಹೇಳಿದರು? 15-20 ಜನರನ್ನು ಆತ್ಮಾಹುತಿ ಬಾಂಬರ್‌ಗಳನ್ನಾಗಿ ತಯಾರಿಸಿ ಪಾಕಿಸ್ತಾನಕ್ಕೆ ಕಳುಹಿಸಿ”ಎಂದುಬಿಟ್ಟಿದ್ದರು ಈ ನಟ.

ನಿರ್ದೇಶಕ ಪ್ರಕಾಶ್ ಝಾ ಅವರ ಚಕ್ರವ್ಯೂಹದಲ್ಲಿ ಕೆಲಸ ಮಾಡುವಾಗ ನಕ್ಸಲರು ಜನರ ಒಳಿತಿಗಾಗಿ ಹೋರಾಡುತ್ತಾರೆಂದು ಓಂ ಪುರಿ ಬಣ್ಣಿಸಿದ್ದರು. ನಕ್ಸಲರು ಭಯೋತ್ಪಾದಕರಲ್ಲ, ಅವರು ಸಾಮಾನ್ಯ ಮತ್ತು ಬಡವರಿಗೆ ಕಿರುಕುಳ ನೀಡುವುದಿಲ್ಲ ಎಂದಿದ್ದರು. 2013 ರಲ್ಲಿ ಪತ್ನಿ ನಂದಿತಾ ಪುರಿ, ಓಂಪುರಿ ವಿರುದ್ಧ ದೂರು ದಾಖಲಿಸಿದ್ದರು. ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆಂದು ದೂರಿದ್ದರು. ಈ ಘಟನೆ ನಂತರ ದಂಪತಿ ವಿಚ್ಛೇದನ ಪಡೆದರು. 26 ವರ್ಷಗಳ ದಾಂಪತ್ಯ ಕೊನೆಗೊಳಿಸಿದರು. ವಿವಾದದ ಕೇಂದ್ರ ಬಿಂದುವಾಗಿದ್ದರೂ ತಮ್ಮ ನಟನೆ ಮೂಲಕವೇ ಗುರುತಿಸಿಕೊಂಡಿದ್ದ ಓಂಪುರಿ 2017ರ ಜನವರಿ 6ರಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...