ನವದೆಹಲಿ: 2018 ರಿಂದ 2022ರ 4 ವರ್ಷದ ಅವಧಿಯಲ್ಲಿ ದೇಶಾದ್ಯಂತ 1022 ಚಿರತೆಗಳು ಹೆಚ್ಚಳವಾಗಿವೆ. 2022ರ ಅಂತ್ಯದಲ್ಲಿ ಸುಮಾರು 13,874 ಚಿರತೆಗಳಿವೆ ಎಂದು ಭಾರತದಲ್ಲಿ ಚಿರತೆಗಳ ಸ್ಥಿತಿಗತಿ ಕುರಿತು ಕೇಂದ್ರ ಪರಿಸರ ಸಚಿವಾಲಯ ವರದಿ ತಿಳಿಸಿದೆ.
ದೇಶದಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 1879 ಚಿರತೆಗಳಿವೆ. ಮಧ್ಯಪ್ರದೇಶದಲ್ಲಿ 3907 ಚಿರತೆಗಳಿದ್ದು ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 1985 ಚಿರತೆಗಳಿದ್ದು ಎರಡನೇ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ 1070 ಚಿರತೆಗಳಿದ್ದು ನಾಲ್ಕನೇ ಸ್ಥಾನದಲ್ಲಿದೆ.
ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ವರದಿ ಬಿಡುಗಡೆ ಮಾಡಿದ್ದಾರೆ. ಚಿರತೆಗಳ ಸಂಖ್ಯೆ ಹೆಚ್ಚಳ ಜೀವ ವೈವಿಧ್ಯತೆಗೆ ದೇಶದ ಅಚಲವಾದ ಸಮರ್ಪಣೆಗೆ ಸಾಕ್ಷಿಯಾಗಿದೆ. ಸುಸ್ಥಿರ ಸಹಬಾಳ್ವೆಗೆ ಜಾಗ ಮಾಡಿ ಕೊಡುವ ವನ್ಯಜೀವಿ ಸಂರಕ್ಷಣೆಯ ವಿವಿಧ ಸಾಮೂಹಿಕ ಪ್ರಯತ್ನಗಳ ಭಾಗವಾದ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.