alex Certify ದೇವಿ ಮೂರ್ತಿಗೆ ವಿಶೇಷ ಅಲಂಕಾರ: ಗೋಡೆ, ನೆಲ ಎಲ್ಲೆಲ್ಲೂ ಕರೆನ್ಸಿಮಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಿ ಮೂರ್ತಿಗೆ ವಿಶೇಷ ಅಲಂಕಾರ: ಗೋಡೆ, ನೆಲ ಎಲ್ಲೆಲ್ಲೂ ಕರೆನ್ಸಿಮಯ…!

ನವರಾತ್ರಿಯಂದು ದುರ್ಗೆ 9 ದಿನಗಳೂ ನವರೂಪದಲ್ಲಿ ಕಂಗೊಳಿಸುತ್ತಿರುತ್ತಾಳೆ. ಅದು ನೋಡುವುದೇ ಒಂದು ಹಬ್ಬ. ಒಂದೊಂದು ಅಲಂಕಾರ ಒಂದೊಂದು ವಿಶೇಷತೆಯಿಂದ ಕೂಡಿರುತ್ತೆ.

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಹಳೆಯದಾದ ದೇವಸ್ಥಾನವೊಂದರಲ್ಲಿ ದುರ್ಗೆಯ ಅಲಂಕಾರ ಭಿನ್ನ ಹಾಗೂ ವಿಶೇಷವಾಗಿರುತ್ತೆ. ಆ ಮೂರ್ತಿಯನ್ನ ಅಲ್ಲಿನ ಆಡಳಿತ ಮಂಡಳಿ, ಭಕ್ತರು ಉಡುಗೊರೆಯಾಗಿ ಕೊಟ್ಟಿರುವ ಹಣ, ಆಭರಣ ಬಳಸಿ ಅಲಂಕಾರ ಮಾಡುತ್ತಾರೆ.

ಹಿಂದೂ ದೇವಾಲಯಗಳಲ್ಲಿ ವಿಗ್ರಹಗಳನ್ನ ಚಿನ್ನದ ಆಭರಣದಿಂದ ಅಲಂಕಾರ ಮಾಡುವುದು ಸಾಮಾನ್ಯ. ಆದರೆ ಕರೆನ್ಸಿ ನೋಟುಗಳನ್ನೂ ಬಳಸಿಕೊಂಡು ದೇಗುಲದ ಗೋಡೆಗಳ ಮೇಲೆ ಮತ್ತು ನೆಲದ ಮೇಲೆ ಅಂಟಿಸಿ ಅಲಂಕಾರ ಮಾಡುವುದು ತುಂಬಾ ಅಪರೂಪ.

ಆದಾಗ್ಯೂ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ 135 ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ ಆಡಳಿತ ಸಮಿತಿಯು ನವರಾತ್ರಿ ಹಬ್ಬದ ಸಮಯದಲ್ಲಿ ಕರೆನ್ಸಿ ಹಾಗೂ ಆಭರಣಗಳನ್ನ ಬಳಸಿಕೊಂಡು ಇಲ್ಲಿ ವಾಸವಿ ಕನ್ನಿಕಾ ಪರಮೇಶ್ವರಿ ದೇವಿಯನ್ನು ಅದ್ಧೂರಿಯಾಗಿ ಅಲಂಕಾರ ಮಾಡುತ್ತಾರೆ.

ನೋಟುಗಳಿಂದ ಮಾಡಿದ ಬಂಟಿಂಗ್ಸ್ ಗಳನ್ನೂ ಸಹ ಮರಗಳ ಮೇಲೆ ಮತ್ತು ಚಾವಣಿಯ ಮೇಲೆ ನೇತು ಹಾಕುವುದನ್ನ ನೋಡಬಹುದು.

ಆಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಗೊಂಡ ಪಟ್ಟಣದಲ್ಲಿರುವ ಈ ದೇವಸ್ಥಾನದಲ್ಲಿರುವ ವಾಸವಿ ಕನ್ನಿಕಾ ಪರಮೇಶ್ವರಿ ದೇವಿಯನ್ನ ನವರಾತ್ರಿ ಹಬ್ಬದ ಸಮಯದಲ್ಲಿ ವಿಶೇಷ ರೀತಿಯಲ್ಲಿ ಅಲಂಕಾರ ಮಾಡಲಾಗಿದೆ. ಈ ಅಲಂಕಾರ 8 ಕೋಟಿ ರೂಪಾಯಿ ಮೌಲ್ಯವುಳ್ಳದ್ದು. ಇತ್ತೀಚಿನ ವರ್ಷಗಳಲ್ಲಿ ದೇವಾಲಯಗಳಲ್ಲಿ ಈ ರೀತಿಯ ಅಲಂಕಾರಗಳು ಹೆಚ್ಚಾಗಿ ಕಂಡು ಬರುತ್ತಿವೆ. ಈ ಹಿಂದೆ ಇದೇ ದೇವಿಗೆ ಸುಮಾರು 5 ಕೋಟಿ ಮೌಲ್ಯದ ಕರೆನ್ಸಿಯಿಂದ ಅಲಂಕಾರ ಮಾಡಲಾಗಿತ್ತು.

ಹೀಗೆ ಕೋಟಿ ಕೋಟಿ ರೂಪಾಯಿ ಮೌಲ್ಯದ ನಂತರ ಈ ಹಣ ಮತ್ತು ಆಭರಣಗಳು ಏನಾಗುತ್ತೆ ಅನ್ನೊ ಸ್ಪಷ್ಟ ಉತ್ತರ ಯಾರ ಬಳಿಯೂ ಇಲ್ಲ. ದೇವಾಲಯ ಟ್ರಸ್ಟ್‌ಗೆ ಹೋಗುತ್ತೆ ಅಂತ ಕೆಲವರು ಹೇಳಿದರೂ ದೇವಸ್ಥಾನದ ಟ್ರಸ್ಟ್ ಮಾತ್ರ ಇದನ್ನ ಒಪ್ಪಿಕೊಳ್ಳಲ್ಲ. ಹಾಗಾದರೆ ಒಂಬತ್ತು ದಿನಗಳ ಪೂಜೆಯ ನಂತರ ಇದೆಲ್ಲವೂ ಹೋಗುವುದೆಲ್ಲಿಗೆ ಅನ್ನುವುದೇ ಎಲ್ಲರ ಪ್ರಶ್ನೆಯಾಗಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...