ಕಳೆದ ವಾರ ಅಂದರೆ ಜುಲೈ 19 ರಿಂದ 25ನೇ ತಾರೀಖಿನವರೆಗೆ ವಿಶ್ವದಲ್ಲಿ 3.8 ಮಿಲಿಯನ್ಗೂ ಅಧಿಕ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ಹಿಂದಿನ ಎಲ್ಲಾ ವಾರಗಳಿಗೆ ಹೋಲಿಕೆ ಮಾಡಿದ್ರೆ ಈ ಸಂಖ್ಯೆಯು 8 ಪ್ರತಿಶತ ಅಧಿಕವಾಗಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಅಮೆರಿಕ ಹಾಗೂ ಪಶ್ಚಿಮ ಪೆಸಿಫಿಕ್ನಲ್ಲಿ ಕ್ರಮವಾಗಿ 30 ಹಾಗೂ 25 ಪ್ರತಿದಷ್ಟು ಪ್ರಕರಣಗಳು ಗಣನೀಯ ಏರಿಕೆ ಕಾಣುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.
ಈ ವಾರದಲ್ಲಿ ಜಾಗತಿಕವಾಗಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 69 ಸಾವಿರ ಆಗಿದ್ದು ಈ ಮೂಲಕ ಹಿಂದಿನ ಎಲ್ಲಾ ವಾರಗಳಿಗೆ ಹೋಲಿಕೆ ಮಾಡಿದ್ರೆ ಸಾವಿನ ಸಂಖ್ಯೆ ಕೂಡ 21 ಪ್ರತಿಶತ ಏರಿಕೆ ಕಂಡಿದೆ.
ಕಳೆದ 1 ವಾರದಲ್ಲಿ ಅತೀ ಹೆಚ್ಚು ಪ್ರಕರಣಗಳು ಅಮೆರಿಕದಲ್ಲಿ ವರದಿಯಾಗುತ್ತಿದೆ. ಇಲ್ಲಿ ಅರ್ಧ ಮಿಲಿಯನ್ಗೂ ಅಧಿಕ ಹೊಸ ಕೊರೊನಾ ಪ್ರಕರಣ ವರದಿಯಾಗಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ. ಅಮೆರಿಕದಂತೆ ಬ್ರೆಜಿಲ್, ಇಂಡೋನೇಷಿಯಾ, ಬ್ರಿಟನ್ ಹಾಗೂ ಭಾರತದಲ್ಲಿ ಕೊರೊನಾ ಪ್ರಕರಣಗಳು ಕ್ರಮವಾಗಿ ಏರಿಕೆಯಾಗ್ತಿದೆ ಎಂದು ಮಾಹಿತಿ ನೀಡಿದೆ.
ಪ್ರಸ್ತುತ ನಾಲ್ಕು ರೂಪಾಂತರಿಗಳನ್ನ ವಿಶ್ವ ಸಂಸ್ಥೆ ಮಾಹಿತಿ ನೀಡಿದೆ. 182 ದೇಶದಲ್ಲಿ ಆಲ್ಫಾ ರೂಪಾಂತರಿ, 131 ದೇಶಗಳಲ್ಲಿ ಬೀಟಾ ರೂಪಾಂತರಿ, ಹಾಗೂ 81 ದೇಶಗಳಲ್ಲಿ ಗ್ಯಾಮಾ ರೂಪಾಂತರಿ ಮತ್ತು ಪ್ರಸ್ತುತ 132 ರಾಷ್ಟ್ರಗಳಲ್ಲಿ ಡೆಲ್ಟಾ ರೂಪಾಂತರಿ ವರದಿಯಾಗಿದೆ ಎಂದು ಮಾಹಿತಿ ನೀಡಿದೆ.