ಪಿರಾನ್ಹಾ ಮೀನುಗಳ ದಾಳಿಯಿಂದ ಕಾಲ್ಬೆರಳು ಕಳೆದುಕೊಂಡ ಬಾಲಕಿ 27-11-2021 7:53AM IST / No Comments / Posted In: Latest News, Live News, International ಪಿರಾನ್ಹಾ ಮೀನು ದಾಳಿಯಿಂದ 13 ವರ್ಷದ ಬಾಲಕಿಯೊಬ್ಬಳು ಕಾಲ್ಬೆರಳು ಕಳೆದುಕೊಂಡ ಘಟನೆ ದಕ್ಷಿಣ ಅಮೆರಿಕಾದ ಅರ್ಜೆಂಟೀನಾದ ಸಾಂಟಾ ಫೆಯ ಪರಾನಾ ನದಿಯಲ್ಲಿ ನಡೆದಿದೆ. ದಡದ ಬಳಿ ಕುಳಿತಿದ್ದ 13 ವರ್ಷದ ಬಾಲಕಿ ಮೇಲೆ ಏಕಾಏಕಿ ಪಿರಾನ್ಹಾ ಗಳು ದಾಳಿ ಮಾಡಿವೆ. ಬಾಲಕಿಯ ಕಾಲ್ಬೆರಳನ್ನು ಈ ಮೀನುಗಳು ಕಚ್ಚಿ ಗಾಯಗೊಳಿಸಿವೆ. ವರದಿಯ ಪ್ರಕರ, ಬಾಲಕಿ ಸೇರಿದಂತೆ ಇತರೆ 30 ಜನರು ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ದಾಳಿಯಲ್ಲಿ 20ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದಾರೆ. ಹೆಚ್ಚಿನ ತಾಪಮಾನ ಮತ್ತು ಕಡಿಮೆ ನೀರಿನ ಮಟ್ಟದಿಂದಾಗಿ ಈ ಪ್ರದೇಶದಲ್ಲಿ ಮೀನುಗಳು ಆಗಾಗ್ಗೆ ಪ್ರವಾಸಿಗರ ಮೇಲೆ ದಾಳಿ ಮಾಡುತ್ತವೆ ಎಂದು ಲೈಫ್‌ಗಾರ್ಡ್‌ಗಳ ಒಕ್ಕೂಟದ ಪ್ರತಿನಿಧಿ ಸೆರ್ಗಿಯೊ ಬೆರಾರ್ಡಿ ವಿವರಿಸಿದ್ದಾರೆ. ಆಳವಿಲ್ಲದ ನೀರಿನ ಪ್ರದೇಶದಲ್ಲಿ ಈ ಜಾತಿಯ ಮೀನುಗಳು ಹೆಚ್ಚು ವಾಸಿಸುತ್ತವೆ. ಪಿರಾನ್ಹಾ ತುಂಬಾ ಅಪಾಯಕಾರಿಯಾಗಿದ್ದು, ಅವು ತುಂಬಾ ಚೂಪಾದ ಹಲ್ಲುಗಳನ್ನು ಹೊಂದಿವೆ. ಕರ್ತವ್ಯದಲ್ಲಿರುವ ಕೋಸ್ಟ್‌ಗಾರ್ಡ್‌ಗಳು ಗಂಭೀರವಾಗಿ ಗಾಯಗೊಂಡ ಜನರಿಗೆ ಸಹಾಯ ಮಾಡಿದ್ದಾರೆ. 2008 ರಿಂದ ನಗರದಲ್ಲಿ ಈ ದಾಳಿಯನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. 2008ರ ದಾಳಿಯಲ್ಲಿ 40 ಮಂದಿ ಗಾಯಗೊಂಡಿದ್ದರು. ಪಿರಾನ್ಹಾ ಮೀನು