alex Certify ವಯಸ್ಸಿನ ಕುರಿತು ಸುಳ್ಳು ಹೇಳಿದ್ದಾರಾ ಕೋಟಿ ರೂಪಾಯಿಗೆ ಬಿಕರಿಯಾದ ವೈಭವ್ ಸೂರ್ಯವಂಶಿ ? ಇಲ್ಲಿದೆ ತಂದೆ ನೀಡಿದ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಯಸ್ಸಿನ ಕುರಿತು ಸುಳ್ಳು ಹೇಳಿದ್ದಾರಾ ಕೋಟಿ ರೂಪಾಯಿಗೆ ಬಿಕರಿಯಾದ ವೈಭವ್ ಸೂರ್ಯವಂಶಿ ? ಇಲ್ಲಿದೆ ತಂದೆ ನೀಡಿದ ಉತ್ತರ

ಐಪಿಎಲ್ 2025 ಹರಾಜಿನಲ್ಲಿ ವೈಭವ್ ಸೂರ್ಯವಂಶಿ ಅತ್ಯಂತ ಕಿರಿಯ ಆಟಗಾರನಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ತಮ್ಮ ಪುತ್ರನಿಗೆ 13 ವರ್ಷವಾಗಿಲ್ಲ ಎಂಬ ಆರೋಪಗಳನ್ನು ಅವರ ತಂದೆ ಸಂಜೀವ್ ಸೂರ್ಯವಂಶಿ ವಯಸ್ಸಿನ ಕುರಿತ ವಂಚನೆಯ ಎಲ್ಲಾ ವದಂತಿಗಳನ್ನುತಿರಸ್ಕರಿಸಿದ್ದಾರೆ.

ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನವೆಂಬರ್ 25 ರಂದು ನಡೆದ ಐಪಿಎಲ್ ಹರಾಜಿನ ಇತಿಹಾಸದಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಭಾರತದ ಬ್ಯಾಟರ್ ವೈಭವ್ ಸೂರ್ಯವಂಶಿ ಪಾತ್ರರಾಗಿದ್ದು, ದೆಹಲಿ ಕ್ಯಾಪಿಟಲ್ಸ್ (DC) ಜೊತೆಗಿನ ತೀವ್ರ ಬಿಡ್ಡಿಂಗ್ ನಂತರ ಸೂರ್ಯವಂಶಿಯನ್ನು ರಾಜಸ್ಥಾನ ರಾಯಲ್ಸ್ (RR) 1.10 ಕೋಟಿ ರೂ.ಗೆ ಖರೀದಿಸಿದೆ.

ಈ ಮೂಲಕ 13 ವರ್ಷದ ವೈಭವ್ ಸೂರ್ಯವಂಶಿ ಗ್ರ್ಯಾಂಡ್ ಟಿ 20 ಲೀಗ್‌ನಲ್ಲಿ ಆಡುವ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ. ಈ ಬೆಳವಣಿಗೆ ಮಧ್ಯೆ ಅವರು 13 ವರ್ಷ ವಯಸ್ಸಿನವರಲ್ಲ ಎಂಬ ವದಂತಿಗಳು ಹರಿದಾಡಿದ್ದು, ಇದಕ್ಕೆ ಉತ್ತರಿಸಿರುವ ಆತನ ತಂದೆ, ವಯಸ್ಸಿನ ಪರೀಕ್ಷೆಗೆ ಮುಕ್ತ ಸವಾಲನ್ನು ನೀಡುವ ಮೂಲಕ ವಯಸ್ಸಿನ ವಂಚನೆಯ ವದಂತಿಗಳನ್ನು ತಳ್ಳಿಹಾಕಿದ್ದಾರೆ.

ಬಿಹಾರದ ಸಮಸ್ತಿಪುರ್‌ನಲ್ಲಿ ಜನಿಸಿದ ಸೂರ್ಯವಂಶಿ ಇತ್ತೀಚೆಗೆ ಅಂಡರ್-19 ಟೆಸ್ಟ್‌ನಲ್ಲಿ ಅತಿ ವೇಗದ ಶತಕವನ್ನು ಬಾರಿಸಿದ್ದರು, ಅಕ್ಟೋಬರ್ 2024 ರಲ್ಲಿ ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧ ಈ ಮೈಲಿಗಲ್ಲು ಸಾಧಿಸಿದ್ದರು.

ಇದಕ್ಕೂ ಮೊದಲು, ಜನವರಿ 2024 ರಲ್ಲಿ, ಅವರು ಮುಂಬೈ ವಿರುದ್ಧದ ರಣಜಿ ಟ್ರೋಫಿ 2023-24 ರಲ್ಲಿ 12 ವರ್ಷ ಮತ್ತು 284 ದಿನಗಳ ವಯಸ್ಸಿನಲ್ಲಿ ದಾಖಲಾದ ಪ್ರಥಮ ದರ್ಜೆ ಪಂದ್ಯದಲ್ಲಿ ಚೊಚ್ಚಲ ಪ್ರವೇಶ ಮಾಡಿದ ನಾಲ್ಕನೇ ಕಿರಿಯ ಭಾರತೀಯ ಆಟಗಾರರಾಗಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...