ರೂರ್ಕೆಲಾದಲ್ಲಿ 13 ವರ್ಷದ ಬಾಲಕಿಯೊಬ್ಬಳು ತನ್ನ ಮಲತಂದೆಯಿಂದ ಪದೇ ಪದೇ ಅತ್ಯಾಚಾರಕ್ಕೊಳಗಾದ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆ ಫೆಬ್ರವರಿ 22-23 ರ ರಾತ್ರಿ ನಡೆದಿದೆ.
ಆರೋಪಿ ರಾಮ್ ಪ್ರಸಾದ್ ಮಿಶ್ರಾ, ಬಾಲಕಿಯ ಮಲತಂದೆ. ಆತ ಬಿಸ್ರಾ ಚೌಕದಲ್ಲಿ ಫಾಸ್ಟ್ ಫುಡ್ ಸ್ಟಾಲ್ ನಡೆಸುತ್ತಿದ್ದು, ಬಾಲಕಿ ಮತ್ತು ಆಕೆಯ ತಾಯಿ ಸೆಕ್ಟರ್ 5 ರ ಗೋಲ್ಘರ್ ಕೊಳೆಗೇರಿಯಲ್ಲಿ ಅವನೊಂದಿಗೆ ವಾಸಿಸುತ್ತಿದ್ದರು.
ಬಾಲಕಿ ಗರ್ಭಾವಸ್ಥೆಯ ಮುಂದುವರಿದ ಹಂತವನ್ನು ತಲುಪಿದಾಗ, ಆಕೆಯ ತಾಯಿ ಆಕೆಯನ್ನು ರೂರ್ಕೆಲಾ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದು, ಅಲ್ಲಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು.
ಆಸ್ಪತ್ರೆಯ ಸಿಬ್ಬಂದಿ ಈ ಘಟನೆಯ ಬಗ್ಗೆ ಆರ್ಎನ್ ಪಾಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಪೊಲೀಸರು ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ನಿರಾಕರಿಸಿದ್ದಾರೆ.
ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು, ಮಲತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನವಜಾತ ಶಿಶುವನ್ನು ಚೈಲ್ಡ್ಲೈನ್ನವರು ರಕ್ಷಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನವಜಾತ ಶಿಶು ಕೇಂದ್ರಕ್ಕೆ ದಾಖಲಿಸಿದ್ದಾರೆ.