ವಾಷಿಂಗ್ಟನ್ : ಕೃತಕ ಬುದ್ಧಿಮತ್ತೆಯಿಂದ ಮಾತ್ರ ಸಾಧಿಸಿದ್ದ ಕ್ಲಾಸಿಕ್ ಕಂಪ್ಯೂಟರ್ ಗೇಮ್ ಟೆಟ್ರಿಸ್ ನಲ್ಲಿ 13 ವರ್ಷದ ಬಾಲಕನೊಬ್ಬ ಗೆಲವು ಸಾಧಿಸಿದ್ದಾನೆ.
ಹೌದು, ಅಮೆರಿಕದ ಬಾಲಕನೊಬ್ಬ ಕ್ಲಾಸಿಕ್ ಕಂಪ್ಯೂಟರ್ ಗೇಮ್ ಟೆಟ್ರಿಸ್ ನಲ್ಲಿ ಗೆಲವು ಸಾಧಿಸಿದ್ದಾನೆ. ಈ ಮೂಲಕ ಇದೇ ಮೊದಲ ಬಾರಿಗೆ ಈ ಗೇಮ್ ಮಾನವ ಗೆಲುವಾಗಿದೆ ಎಂದು ವರದಿಯಾಗಿದೆ. ಈ ಹಿಂದೆ ಈ ಕ್ಲಾಸಿಕ್ ಕಂಪ್ಯೂಟರ್ ಗೇಮ್ ಟೆಟ್ರಿಸ್ ಅನ್ನು ಕೃತಕ ಬುದ್ಧಿಮತ್ತೆಯಿಂದ ಮಾತ್ರ ಗೆಲುವು ಸಾಧಿಸಲಾಗಿತ್ತು.
“ಬ್ಲೂ ಸ್ಕುಟಿ” ಎಂದು ಕರೆಯಲ್ಪಡುವ ಸ್ಪರ್ಧಾತ್ಮಕ ಗೇಮರ್ ವಿಲ್ಲೀಸ್ ಗಿಬ್ಸನ್, ಒಗಟು ಆಟದ ನಿಂಟೆಂಡೊ ಆವೃತ್ತಿಯ “ಕಿಲ್ ಸ್ಕ್ರೀನ್” ಅನ್ನು ತಲುಪಿದ ಮೊದಲ ವ್ಯಕ್ತಿಯಾಗಿದ್ದಾರೆ. ಗೆಲುವಿನ ಬಳಿಕ ವಿಲ್ಲೀಸ್ ಗಿಬ್ಸನ್ ನನ್ನ ಬೆರಳುಗಳನ್ನು ನಾನು ಅನುಭವಿಸಲು ಸಾಧ್ಯವಿಲ್ಲ ಹೇಳಿದ್ದಾನೆ.
ಕ್ಲಾಸಿಕ್ ಟೆಟ್ರಿಸ್ ವಿಶ್ವ ಚಾಂಪಿಯನ್ಶಿಪ್ ಅಧ್ಯಕ್ಷ ವಿನ್ಸ್ ಕ್ಲೆಮೆಂಟೆ ಮಾತನಾಡಿ, “ಇದನ್ನು ಹಿಂದೆಂದೂ ಮನುಷ್ಯ ಮಾಡಿಲ್ಲ.ಇದು ಮೂಲತಃ ಒಂದೆರಡು ವರ್ಷಗಳ ಹಿಂದಿನವರೆಗೂ ಅಸಾಧ್ಯವೆಂದು ಎಲ್ಲರೂ ಭಾವಿಸಿದ್ದರು ಎಂದು ಹೇಳಿದ್ದಾರೆ.